ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ನಿಷೇಧ ಕಾನೂನು: ಗುಜರಾತ್‌ನಲ್ಲಿ ಮೊದಲ ಬಂಧನ

Last Updated 18 ಜೂನ್ 2021, 23:14 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ರಾಜ್ಯದಲ್ಲಿ ಹೊಸದಾಗಿ ಜಾರಿಗೆ ಬಂದಿರುವ, ಬಲವಂತದ ಅಥವಾ ಮೋಸದ ಮತಾಂತರ ವಿರೋಧಿ ಕಾನೂನಿನಡಿ ಗುಜರಾತ್‌ ಪೊಲೀಸರು ಮೊದಲ ಎಫ್‌ಐಆರ್‌ ದಾಖಲಿಸಿ ಒಬ್ಬ ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ–2021ರಡಿ ರೂಪಿಸಿರುವ ಕಾನೂನಿನ ಅಡಿಯಲ್ಲಿ ವಡೋದರ ನಗರದ ಗೋತ್ರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು 26 ವರ್ಷ ವಯಸ್ಸಿನ ಸಮೀರ್‌ ಖುರೇಷಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮದುವೆಯ ಮೂಲಕ ಒತ್ತಾಯದ ಮತಾಂತರಕ್ಕೆ ಒಳಪಡಿಸುವ ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿಸಲು ಈ ಕಾನೂನಿನಲ್ಲಿ ಅವಕಾಶವಿದೆ.

ಮಾಂಸ ಮಾರಾಟದ ಅಂಗಡಿ ನಡೆ
ಸುತ್ತಿರುವ ಖುರೇಷಿಯು 2019ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತನ್ನನ್ನು ಸ್ಯಾಮ್‌ ಮಾರ್ಟಿನ್‌, ತಾನು ಕ್ರೈಸ್ತ ಧರ್ಮಕ್ಕೆ ಸೇರಿದವನೆಂದು ಪರಿಚಯಿಸಿ
ಕೊಂಡು ಇನ್ನೊಂದು ಧರ್ಮದ ಮಹಿಳೆಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ.

‘ಪ್ರೀತಿಯ ಬಲೆಗೆ ಬಿದ್ದಿದ್ದ ಮಹಿಳೆಯ ಚಿತ್ರಗಳನ್ನು ಬಳಸಿಕೊಂಡು ಆರೋಪಿಯು ಆಕೆಯನ್ನು ಬ್ಯ್ಲಾಕ್‌ಮೇಲ್ ಮಾಡಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ. ಈ ಅವಧಿಯಲ್ಲಿ ಗರ್ಭಪಾತ ಮಾಡಿಸಲೂ ಆತ ಮಹಿಳೆಯನ್ನು ಒತ್ತಾಯಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ’ ಎಂದು ಡಿಸಿಪಿ ಜಯರಾಜಸಿನ್ಹ ವಾಲಾ ತಿಳಿದ್ದಾರೆ.

ಮಹಿಳೆಯು ಒಂದು ವರ್ಷದ ಹಿಂದೆ ಮದುವೆಗೆ ಸಮ್ಮತಿ ಸೂಚಿ ಸಿದ್ದರು. ಆದರೆ, ಕ್ರೈಸ್ತ ಮತಾನುಸಾರ ಮದುವೆಯಾಗುವ ಬದಲು ‘ನಿಕಾಹ್‌’ ಆಯೋಜಿಸಲು ಆರೋಪಿಯು ಸಿದ್ಧತೆ ಮಾಡಿಕೊಂಡಾಗ ಆತ ಬೇರ ಧರ್ಮೀಯನೆಂಬುದು ಆಕೆಗೆ ತಿಳಿದು ಬಂದಿತ್ತು. ಮದುವೆಯ ಬಳಿಕ ಮೊದಲು ಆಕೆಯ ಹೆಸರು ಬದಲಿಸಲಾಯಿತು. ಆನಂತರ ಮತಾಂತರ ಆಗುವಂತೆ ಆಕೆಯ ಮೇಲೆ ಒತ್ತಡ ಹೇರಲು ಆರಂಭಿಸಿದ್ದ. ಆರೋಪಿಯು ಮಹಿಳೆಯ ಜಾತಿ ನಿಂದನೆಯನ್ನೂ ಮಾಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT