ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಕಾಶ ಹೆಚ್ಚಿಸಲು ಹೊಸ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್

Last Updated 12 ನವೆಂಬರ್ 2020, 10:57 IST
ಅಕ್ಷರ ಗಾತ್ರ

ನವದೆಹಲಿ: ಹೊಸ ನೇಮಕಾತಿ ಮಾಡುವ ಸಂಸ್ಥೆಗಳಿಗೆ ಸಬ್ಸಿಡಿನೀಡುವ ಹೊಸ ಉದ್ಯೋಗ ಸೃಷ್ಟಿ ಯೋಜನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಘೋಷಿಸಿದ್ದಾರೆ. ಉದ್ಯೋಗಿಗಳ ನಿವೃತ್ತಿ ನಿಧಿ ಮತ್ತು ಉದ್ಯೋಗದಾತರಿಗೆ ಎರಡು ವರ್ಷದ ಸಬ್ಸಿಡಿ ಈ ಮೂಲಕ ಲಭಿಸಲಿದೆ.

ನೌಕರರ ಕೊಡುಗೆ (ಶೇಕಡಾ 12 ರಷ್ಟು ವೇತನ) ಮತ್ತು ಉದ್ಯೋಗದಾತರ ಕೊಡುಗೆ (ಶೇಕಡಾ 12 ರಷ್ಟು ವೇತನ) ಒಟ್ಟು 24 ಶೇಕಡಾ ವೇತನವನ್ನು ಸಂಸ್ಥೆಗಳಿಗೆ ಎರಡು ವರ್ಷಗಳವರೆಗೆ ನೀಡಲಾಗುವುದು ಎಂದು ಅವರು ಹೇಳಿದರು.

ಆತ್ಮನಿರ್ಭರ್ ಭಾರತ್ ರೋಜ್‌ಗಾರ್ ಯೋಜನೆ ಅಡಿಯಲ್ಲಿ, ಹೊಸ ಉದ್ಯೋಗಿಗಳನ್ನು ನೇಮಕ ಮಾಡುವ ನೋಂದಾಯಿತ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸಂಸ್ಥೆಗೆ ಈ ಸಬ್ಸಿಡಿ ಸಿಗಲಿದೆ.

ಇಪಿಎಫ್‌ಒ-ನೋಂದಾಯಿತ ಸಂಸ್ಥೆಯಲ್ಲಿ ಮಾಸಿಕ ₹15,000ಕ್ಕಿಂತಕಡಿಮೆ ವೇತನದಲ್ಲಿ ಉದ್ಯೋಗಕ್ಕೆ ಸೇರುವ ಯಾವುದೇ ಹೊಸ ನೌಕರರಿಗೆ ಈ ಯೋಜನೆ ಅನ್ವಯವಾಗಲಿದೆ.

ಇದು ಮಾರ್ಚ್ 1, 2020 ರಿಂದ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗದಿಂದ ನಿರ್ಗಮಿಸಿದ 15 ಸಾವಿರ ರೂ.ಗಿಂತ ಕಡಿಮೆ ವೇತನವನ್ನು ಪಡೆಯುತ್ತಿದ್ದ ಇಪಿಎಫ್ ಸದಸ್ಯರಿಗೆ ಮತ್ತು 2020 ರ ಅಕ್ಟೋಬರ್ 1 ರಂದು ಅಥವಾ ನಂತರ ಉದ್ಯೋಗದಲ್ಲಿರುವವರಿಗಾಗಿದೆ.

ಉದ್ಯೋಗದಾತ ಸಂಸ್ಥೆಯು ಇಪಿಎಫ್‍ಒ ನೋಂದಣಿ ಆಗಿದ್ದು, 2020 ಸೆಪ್ಟೆಂಬರ್‌ವರೆಗಿರುವ ನೌಕರರ ಸಂಖ್ಯೆಯನ್ನು ಆಧಾರಿಸಿ ಹೊಸ ನೌಕರರನ್ನು ಸೇರಿಸಿದ್ದರೆ ಅವರಿಗೂ ಈ ಯೋಜನೆ ಅನ್ವಯಿಸುತ್ತದೆ.

50 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಕನಿಷ್ಠ ಎರಡು ಹೊಸ ಉದ್ಯೋಗಿಗಳನ್ನುಸೇರಿಸಬೇಕು. 50 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಆ ಸಂಸ್ಥೆಗಳು ಕನಿಷ್ಠ ಐದು ಹೊಸ ಉದ್ಯೋಗಗಳನ್ನು ನೀಡಬೇಕಾಗುತ್ತದೆ.
ಈ ಯೋಜನೆ ಜೂನ್ 30, 2021 ರವರೆಗೆ ಕಾರ್ಯನಿರ್ವಹಿಸಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT