ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಹೇರಿಕೆ ತಡೆಯಬೇಕೆಂದರೆ ಕೋವಿಡ್ ನಿಯಮ ಪಾಲಿಸಿ: ಉದ್ಧವ್ ಠಾಕ್ರೆ

Last Updated 23 ನವೆಂಬರ್ 2020, 5:23 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಿರ್ಲಕ್ಷ್ಯ ತೋರಬಾರದು ಮತ್ತು ಮತ್ತೊಂದು ಲಾಕ್‌ಡೌನ್ ಹೇರಿಕೆಯನ್ನು ತಪ್ಪಿಸಲು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.

ರಾತ್ರಿ ಕರ್ಫ್ಯೂ ವಿಧಿಸಲು ಸೂಚಿಸಲಾಗಿದ್ದರೂ, ಅಂತಹ ನಿರ್ಬಂಧಗಳನ್ನು ಹೇರುವ ಮೂಲಕ ಏನನ್ನಾಧರೂ ಸಾಧಿಸಬಹುದು ಎಂಬುದನ್ನು ನಾನು ನಂಬುವುದಿಲ್ಲ. ಅನ್‌ಲಾಕ್ ಪ್ರಕ್ರಿಯೆಯು ಸಾಂಕ್ರಾಮಿಕ ರೋಗವು ಇನ್ನಿಲ್ಲ ಎಂಬುದರ ಅರ್ಥವಲ್ಲ ಎಂದು ಹೇಳಿದ ಅವರು, ಜನರು ಈ ಬಗ್ಗೆ ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದರು.

'ಜನರು ಹೆಚ್ಚಾಗಿ ಕೋವಿಡ್-19 ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತಿದ್ದರೂ, ಇನ್ನೂ ಅನೇಕರು ಮಾಸ್ಕ್‌ಗಳನ್ನು ಕಡ್ಡಾಯವಾಗಿ ಬಳಸಬೇಕೆಂಬ ಮಾರ್ಗಸೂಚಿಯನ್ನು ಅನುಸರಿಸುತ್ತಿಲ್ಲ ಮತ್ತು ಇನ್ನೂ ಜನದಟ್ಟಣೆಯ ಸ್ಥಳಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದರು.

'ದೆಹಲಿಯಲ್ಲಿ ಎರಡನೇ ಅಲೆಯ ಕೋವಿಡ್ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ ಮತ್ತು ಅಹಮದಾಬಾದಿನಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿದೆ. ಮತ್ತೊಂದು ಲಾಕ್‌ಡೌನ್‌ ಏರಿಕೆ ಮಾಡುವುದು ನನಗೆ ಬೇಡ, ಆದರೆ ನೀವು ಸಹ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು'. 'ನಾವು ಅಪಾಯಕಾರಿ ತಿರುವಿನಲ್ಲಿ ನಿಂತಿದ್ದೇವೆ. ನಾವು ಲಾಕ್‌ಡೌನ್‌ಗೆ ಹೋಗಬೇಕೆ ಅಥವಾ ಎಲ್ಲಾ ಕಡ್ಡಾಯ ಕೋವಿಡ್-19 ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕೆ ಎಂಬುದನ್ನು ನಾವು ನಿರ್ಧರಿಸಬೇಕಿದೆ' ಎಂದು ಅವರು ಹೇಳಿದರು.

'ಪಟಾಕಿ ರಹಿತ ದೀಪಾವಳಿಯನ್ನು ಆಚರಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದರೆ ಕೋವಿಡ್- 19 ಸುರಕ್ಷತಾ ನಿಯಮಗಳನ್ನು ಅನೇಕ ಸ್ಥಳಗಳಲ್ಲಿ ಅನುಸರಿಸುತ್ತಿಲ್ಲ. ಅನಗತ್ಯವಾಗಿ ತಿರುಗಾಡುವುದನ್ನು ತಪ್ಪಿಸಿ ಮತ್ತು ನೀವು ಹೊರಗೆ ಹೋಗಬೇಕಾದರೆ ದಯವಿಟ್ಟು ಮಾಸ್ಕ್‌ ಧರಿಸಿ, ದೈಹಿಕ ಅಂತರವನ್ನು ಕಾಪಾಡಿಕೊಳ್ಳಿ' ಎಂದು ಅವರು ಹೇಳಿದರು.

'ಸುರಕ್ಷತಾ ನಿಯಮಗಳನ್ನು ಅನುಸರಿಸದ ಕಾರಣದಿಂದಾಗಿ ಯುವಕರು ಸೋಂಕಿಗೆ ಒಳಗಾಗುತ್ತಿದ್ದಾರೆ ಮತ್ತು ಅವರು ತಮ್ಮ ಕುಟುಂಬಗಳಲ್ಲಿನ ಹಿರಿಯ ನಾಗರಿಕರಿಗೆ ಸೋಂಕನ್ನು ಅಂಟಿಸುತ್ತಿದ್ದಾರೆ. ಕೋವಿಡ್ ಸೋಂಕಿನ ಈ ಎಲ್ಲಾ ತಿಂಗಳುಗಳಲ್ಲಿ ನಾವು ರಕ್ಷಿಸಿದ ಜನರು, ಕುಟುಂಬದ ಕಿರಿಯ ಸದಸ್ಯರಿಂದ ಸೋಂಕಿಗೆ ಒಳಗಾಗುತ್ತಿರುವುದು ನಿಜವಾಗಿಯೂ ದುಃಖಕರವಾಗಿದೆ' ಎಂದು ಮುಖ್ಯಮಂತ್ರಿ ಹೇಳಿದರು.

'ಕೋವಿಡ್-19 ಚಿಕಿತ್ಸೆಗಾಗಿ ವ್ಯಾಕ್ಸಿನೇಷನ್ ಮತ್ತು ಔಷಧಿಗಳ ಲಭ್ಯತೆಯ ಬಗ್ಗೆ ಇನ್ನೂ ಗೊಂದಲವಿದೆ. ಲಸಿಕೆ ಲಭ್ಯವಾಗುವವರೆಗೆ ಮಾಸ್ಕ್‌ಗಳು, ದೈಹಿಕ ಅಂತರ ಮತ್ತು ಸ್ಯಾನಿಟೈಸರ್‌ಗಳನ್ನು ಬಳಸುವುದನ್ನು ಹೊರತುಪಡಿಸಿ ನಮಗೆ ಬೇರೆ ಆಯ್ಕೆಗಳಿಲ್ಲ'. ಕೊರೊನಾವೈರಸ್‌ನ ಸೋಂಕಿನ ನಂತರದ ಅಡ್ಡಪರಿಣಾಮಗಳು ಅಸ್ವಸ್ಥತೆ ಹೊಂದಿರುವ ರೋಗಿಗಳಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತಿವೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ, 'ಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದರೆ ಸಾಂಕ್ರಾಮಿಕ ರೋಗವು ಮುಗಿದಿದೆ ಎಂದರ್ಥವಲ್ಲ. ಧಾರ್ಮಿಕ ಪೂಜಾ ಸ್ಥಳಗಳನ್ನು ಪುನಃ ತೆರೆಯಲಾಗಿದ್ದರೂ, ಅಲ್ಲಿ ಜನಸಂದಣಿಯನ್ನು ತಪ್ಪಿಸಿ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಹಲವಾರು ಹಬ್ಬಗಳು ಕಳೆದಿವೆ, ಬಹುಸಂಖ್ಯಾತ ಜನರು ಇದನ್ನು ಜನಸಂದಣಿಯಿಲ್ಲದೆ ಆಚರಿಸಿದ್ದಾರೆ. ಇದರಿಂದಾಗಿ ಸೋಂಕು ಹರಡುವಿಕೆಯನ್ನು ನಾವು ನಿಯಂತ್ರಿಸಲು ಸಾಧ್ಯವಾಗುತ್ತದೆ, ಆದರೆ ಅಸಡ್ಡೆ ತೋರಿಸಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.

ದೆಹಲಿ ಮತ್ತು ಅಹಮದಾಬಾದ್‌ಗಳಲ್ಲಿ ಎರಡನೇ ಹಂತದ ಅಲೆ ಆರಂಭವಾಗಿದೆ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಸುನಾಮಿಯಂತೆ ಕಾಣುತ್ತಿದೆ ಹೊರತು ಅಲೆಯಲ್ಲ. ಹಾಗಾಗಿ ನಾವು ಜಾಗರೂಕರಾಗಿರಬೇಕು. 'ನನ್ನ ಕುಟುಂಬ, ನನ್ನ ಜವಾಬ್ದಾರಿ' ಅಭಿಯಾನವು ರಾಜ್ಯದ ಆರೋಗ್ಯ ನಕ್ಷೆಯನ್ನು ಪಡೆಯಲು ಸರ್ಕಾರಕ್ಕೆ ಸಹಾಯ ಮಾಡಿದೆ ಎಂದು ಅವರು ಹೇಳಿದರು.

ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ ನಿರ್ಧಾರ ಕೈಗೊಂಡಿದ್ದರೂ, ಶಾಲೆಗಳನ್ನು ಮತ್ತೆ ತೆರೆಯುವ ಬಗ್ಗೆ ಅನಿಶ್ಚಿತತೆ ಇದೆ ಎಂದು ಠಾಕ್ರೆ ಹೇಳಿದರು.ನವೆಂಬರ್ 23 ರಿಂದ 9 ರಿಂದ 12 ನೇ ತರಗತಿಗಳಿಗೆ ಶಾಲೆಗಳನ್ನು ಮತ್ತೆ ತೆರೆಯಲು ಸರ್ಕಾರ ಈ ಹಿಂದೆ ನಿರ್ಧರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT