ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಅಕ್ರಮ ವರ್ಗಾವಣೆ: ಕಾನೂನು ಸಂಸ್ಥೆ ಆರಂಭಿಸಿದ ಕರ್ನಲ್‌ ಸಿಂಗ್‌

Last Updated 2 ನವೆಂಬರ್ 2022, 16:09 IST
ಅಕ್ಷರ ಗಾತ್ರ

ನವದೆಹಲಿ: ಜಾರಿ ನಿರ್ದೇಶನಾಲಯದ (ಇಡಿ) ಮಾಜಿ ನಿರ್ದೇಶಕ ಕರ್ನಲ್‌ ಸಿಂಗ್‌ ಅವರು ಹಣ ಅಕ್ರಮ ವರ್ಗಾವಣೆ, ವಂಚನೆ, ಕಾರ್ಪೊರೇಟ್ ವ್ಯಾಜ್ಯ ಸೇರಿದಂತೆ ಇತರೆ ಪ್ರಕರಣಗಳ ಕುರಿತು ಕಾನೂನು ಸೇವೆ ಹಾಗೂ ಸಲಹೆ ನೀಡುವುದಕ್ಕಾಗಿ ‘ಸರ್ಕಲ್‌ ಆಫ್‌ ಕೌನ್ಸೆಲ್ಸ್‌’ ಹೆಸರಿನ ಕಾನೂನು ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ.

‘ವಿದೇಶಿ ವಿನಿಮಯ ನಿರ್ವಹಣಾ ಕಾನೂನು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ, ಆಂತರಿಕ ತನಿಖೆ, ಭ್ರಷ್ಟಾಚಾರ ತಡೆ, ಕ್ರಿಪ್ಟೊ ಕರೆನ್ಸಿ ಸೇರಿದಂತೆ ಕಾನೂನು ಕ್ಷೇತ್ರದ ವಿವಿಧ ಮಜಲುಗಳ ಬಗ್ಗೆ ಅಪಾರ ಅನುಭವ ಹೊಂದಿರುವ ವೃತ್ತಿಪರರು ಹಾಗೂ ಇತರರು ಸೇರಿಕೊಂಡು ಸರ್ಕಲ್‌ ಆಫ್ ಕೌನ್ಸೆಲ್ಸ್ ಸಂಸ್ಥೆ ಆರಂಭಿಸಲಾಗಿದೆ. ವಕೀಲರಾದ ವಿಕ್ರಂ ಸಿಂಗ್‌, ಜಾಸ್ಮೀನ್‌ ದಮಕೆವಾಲಾ, ರಸೆಲ್‌ ಎ ಸ್ಟೇಮಟ್ಸ್‌ ಮತ್ತು ಅರ್ಚಿತ್‌ ಸಿಂಗ್‌ ಅವರು ಈ ಸಂಸ್ಥೆಯ ಭಾಗವಾಗಿದ್ದಾರೆ. ಸಂಸ್ಥೆಯ ಕಚೇರಿಯು ಕೇಂದ್ರ ದೆಹಲಿಯಲ್ಲಿ ಇರಲಿದೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT