ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ್‌ ಸಿಂಗ್‌ 'ಶೀಘ್ರ ಗುಣಮುಖರಾಗಲು ಪ್ರಾರ್ಥನೆ': ಪ್ರಧಾನಿ ಮೋದಿ ಟ್ವೀಟ್

ಅಕ್ಷರ ಗಾತ್ರ

ನವದೆಹಲಿ: ಬೆಳಿಗ್ಗೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಆರೋಗ್ಯ ಸ್ಥಿತಿಯ ಕುರಿತು ಟ್ವೀಟಿಸಿ, 'ಶೀಘ್ರ ಗುಣಮುಖರಾಗಲೆಂದು ದೇಶದಾದ್ಯಂತ ಬಹಳಷ್ಟು ಜನರು ಪ್ರಾರ್ಥಿಸುತ್ತಿದ್ದಾರೆ' ಎಂದಿದ್ದಾರೆ.

ಲಖನೌದ ಸಂಜಯ್‌ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಯ ಐಸಿಯುನಲ್ಲಿರುವ ಕಲ್ಯಾಣ್‌ ಸಿಂಗ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಮುಖಂಡರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು.

'ಕಲ್ಯಾಣ್‌ ಸಿಂಗ್‌ ಅವರ ಮೊಮ್ಮಗನೊಂದಿಗೆ ಈಗಷ್ಟೇ ಮಾತನಾಡಿ ಆರೋಗ್ಯ ಸ್ಥಿತಿಯ ಕುರಿತು ವಿಚಾರಿಸಿದೆ. ಕಲ್ಯಾಣ್‌ ಸಿಂಗ್‌ ಅವರೊಂದಿಗೆ ಮಾತುಕತೆಯ ಹಲವು ನೆನಪುಗಳು ನನ್ನಲ್ಲಿವೆ. ಅವರೊಂದಿಗಿನ ಮಾತು ಸದಾಕಾಲಕ್ಕೂ ಕಲಿಕೆಯ ಅನುಭವವಾಗಿತ್ತು' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.

ರಾಜಸ್ಥಾನದ ಮಾಜಿ ರಾಜ್ಯಪಾಲ, ಬಿಜೆಪಿ ಮುಖಂಡ ಕಲ್ಯಾಣ್‌ ಸಿಂಗ್‌ (89) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿರುವುದಾಗಿ ಆಸ್ಪತ್ರೆ ಶುಕ್ರವಾರ ತಿಳಿಸಿದೆ.

ಪ್ರಜ್ಞೆ ಕ್ಷೀಣಿಸಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಭಾನುವಾರ ಸಂಜೆ ಸಂಜಯ್‌ ಗಾಂಧಿ ವೈದ್ಯಕೀಯ ಸಂಸ್ಥೆಗೆ ದಾಖಲಾಯಿತು. ಅವರು ಕಳೆದ ಮೂರು ವಾರಗಳಿಂದ ಅನಾರೋಗ್ಯ ಪೀಡಿತರಾಗಿದ್ದಾರೆ.

ಆಸ್ಪತ್ರೆಯಲ್ಲಿ ಹೃದ್ರೋಗ, ಮೂತ್ರಪಿಂಡ ಶಾಸ್ತ್ರ, ನರವಿಜ್ಞಾನ ಸೇರಿದಂತೆ ಹಲವು ವಿಭಾಗಗಳ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ, ತಜ್ಞ ವೈದ್ಯರು ಕಲ್ಯಾಣ್‌ ಸಿಂಗ್‌ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ.

1992ರಲ್ಲಿ ಕರಸೇವಕರು ಬಾಬರಿ ಮಸೀದಿ ನೆಲಸಮಗೊಳಿಸಿದ ಸಂದರ್ಭದಲ್ಲಿ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದರು. ಇದೇ ಕಾರಣಕ್ಕೆ ನ್ಯಾಯಾಂಗ ನಿಂದನೆಯ ವಿಚಾರವಾಗಿ ಸುಪ್ರೀಂ ಕೋರ್ಟ್ ಸಿಂಗ್‌ ಅವರಿಗೆ ದಂಡ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT