ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘಾಲಯದ ನಾಲ್ವರು ಶಾಸಕರು ಬಿಜೆಪಿ ತೆಕ್ಕೆಗೆ

Last Updated 14 ಡಿಸೆಂಬರ್ 2022, 11:30 IST
ಅಕ್ಷರ ಗಾತ್ರ

ನವದೆಹಲಿ: ಮೇಘಾಲಯದ ಆಡಳಿತರೂಢ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ (ಎನ್‌ಪಿಪಿ) ಇಬ್ಬರು ಶಾಸಕರು ಸಹಿತ ನಾಲ್ವರು ಶಾಸಕರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಕ್ಷದ ಇಲ್ಲಿನ ಪ್ರಧಾನ ಕಚೇರಿಯಲ್ಲಿ ಎನ್‌ಪಿಪಿಯ ಶಾಸಕರಾದ ಬೆನೆಡಿಕ್‌ ಮರಾಕ್ ಮತ್ತು ಫೆರ್ಲಿನ್ ಸಾಂಗ್ಮಾ,ತೃಣಮೂಲ ಕಾಂಗ್ರೆಸ್‌ ಶಾಸಕ ಹಿಮಾಲಯ ಮುಕ್ತನ್‌ ಶಾಂಗ್‌ಲ್ಪಿಯಾಂಗ್‌ ಹಾಗೂಪಕ್ಷೇತರ ಶಾಸಕ ಸ್ಯಾಮ್ಲುಯೆಲ್‌ ಎಂ. ಸಂಗ್ಮಾ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ಬಿಸ್ವಾ ಶರ್ಮಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಮೇಘಾಲಯ ವಿಧಾನಸಭೆಗೆ ಚುನಾವಣೆ ಹತ್ತಿರವಿರುವಾಗ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಬಿಜೆಪಿಗೆ ನಾಲ್ವರು ಶಾಸಕರ ಸೇರ್ಪಡೆ ಬಲ ನೀಡಿದೆ.60 ಸದಸ್ಯ ಬಲದ ಮೇಘಾಲಯ ವಿಧಾನಸಭೆಯಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿತ್ತು.

ಆಡಳಿತರೂಢ ಎನ್‌ಪಿಪಿಯು, ಬಿಜೆಪಿ ನೇತೃತ್ವದ ನ್ಯಾಷನಲ್‌ ಡೆಮಾಕ್ರಟಿಕ್‌ ಪಾರ್ಟಿಯ (ಎನ್‌ಡಿಪಿ)ಯ ಭಾಗವಾಗಿದ್ದರೂ ಸಂಬಂಧಗಳು ಹಳಸಿವೆ. ಎನ್‌ಪಿಪಿಯ ಇಬ್ಬರು ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಬಿಜೆಪಿಯ ನಿರ್ಧಾರ, ಫೆಬ್ರುವರಿಯಲ್ಲಿ ನಡೆಯುವ ಚುನಾವಣೆಗೂ ಮೊದಲು ಎನ್‌ಪಿಪಿ ಮೂಲೆಗುಂಪಾಗಿಸಿ,ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ನಿರ್ಧರಿಸಿರುವುದನ್ನು ಒತ್ತಿಹೇಳಿದಂತಿದೆ.

ನಾಲ್ವರು ಅನುಭವಿಗಳು ಮತ್ತು ಗೌರವಾನ್ವಿತ ರಾಜಕಾರಣಿಗಳ ಸೇರ್ಪಡೆಯು ರಾಜ್ಯದಲ್ಲಿ ಪಕ್ಷದ ಹೊಸ ಆರಂಭ ಎಂದುಮೇಘಾಲಯ ರಾಜ್ಯಕ್ಕೆ ಪಕ್ಷದ ಉಸ್ತುವಾರಿಯಾಗಿರುವ ಹಿಮಂತ್‌ ಬಿಸ್ವಾ ಶರ್ಮಾ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT