ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೀನ್ಯತೆ ಸೂಚ್ಯಂಕ: ಮೊದಲ 50 ರಾಷ್ಟ್ರಗಳ ಸಾಲಿನಲ್ಲಿ ಭಾರತ; ಫ್ರಾನ್ಸ್ ಅಭಿನಂದನೆ

Last Updated 4 ಸೆಪ್ಟೆಂಬರ್ 2020, 2:11 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಜಾಗತಿಕ ನಾವೀನ್ಯತೆ ಸೂಚ್ಯಂಕ (ಜಿಐಐ) ಪಟ್ಟಿಯ ಮೊದಲ 50 ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದಕ್ಕೆ ಫ್ರಾನ್ಸ್ ರಾಯಬಾರಿ ಇಮ್ಯಾನುಯೆಲ್ ಲೆನೈನ್ ಅಭಿನಂದಿಸಿದ್ದಾರೆ.

ಫ್ರಾನ್ಸ್ ಹಾಗೂ ಭಾರತ ನಾವಿನ್ಯತೆಯ ದಿಕ್ಕಿನಲ್ಲಿ ಒಟ್ಟಾಗಿ ಮುನ್ನಡೆಯಬಹುದಾಗಿದ್ದು, 2021ರಲ್ಲಿ ನಡೆಯಲಿರುವ ಭಾರತ–ಫ್ರಾನ್ಸ್‌ ಜ್ಞಾನ ಶೃಂಗಸಭೆಯನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

‘ವಿಶ್ವದ ಅತ್ಯಂತ ನಾವೀನ್ಯತೆ ಹೊಂದಿರುವ ಅಗ್ರ 50 ರಾಷ್ಟ್ರಗಳ ಗುಂಪಿನಲ್ಲಿ ಕಾಣಿಸಿಕೊಂಡಿರುವುದಕ್ಕೆ ಭಾರತಕ್ಕೆ ಅಭಿನಂದನೆಗಳು. ಫ್ರಾನ್ಸ್ ಕೂಡ 4 ಶ್ರೇಯಾಂಕ ಹೆಚ್ಚಿಸಿಕೊಂಡು, ಜಿಐಐ–2020 ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. ಭಾರತದ ಧ್ವಜ ಹಾಗೂ ಫ್ರಾನ್ಸ್‌ ಧ್ವಜ ಒಟ್ಟಾಗಿ ಸೇರಿ ನಾವೀನ್ಯತೆಯನ್ನು ಮುಂದುವರಿಸಬಹುದು. ನಾವು2021ರಲ್ಲಿ ನಡೆಯಲಿರುವ ಭಾರತ–ಫ್ರಾನ್ಸ್‌ ಜ್ಞಾನ ಶೃಂಗಸಭೆಯನ್ನು ಎದುರು ನೋಡುತ್ತಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಜಿಐಐ–2020 ಪಟ್ಟಿಯಲ್ಲಿ ಭಾರತ ನಾಲ್ಕು ಸ್ಥಾನ ಮೇಲೇರಿದ್ದು, ವರ್ಲ್ಡ್‌ ಇಂಟಲೆಕ್ಚುವಲ್‌ ಪ್ರಾಪರ್ಟಿ ಆರ್ಗನೈಜೇಷನ್ (ಡಬ್ಲ್ಯೂಐಪಿಒ) ಗುರುತಿಸಿರುವ ಅಗ್ರ 50 ರಾಷ್ಟ್ರಗಳ ಪಟ್ಟಿಯಲ್ಲಿ 48ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.2019ರಲ್ಲಿ 52 ಮತ್ತು 2015ರಲ್ಲಿ 81ನೇ ಸ್ಥಾನದಲ್ಲಿತ್ತು.

ಕಳೆದ 5 ವರ್ಷಗಳಿಂದ ತನ್ನ ನಾವೀನ್ಯತೆ ಶ್ರೇಯಾಂಕದಲ್ಲಿ ಸ್ಥಿರ ಸುಧಾರಣೆಯನ್ನು ಸಾಧಿಸಿರುವುದರಿಂದ, ಭಾರತವುಮಧ್ಯ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ 2019ರ ಪ್ರಮುಖ ನಾವೀನ್ಯತೆ ಸಾಧಕ ರಾಷ್ಟ್ರಗಳಲ್ಲಿ ಒಂದೆನಿಸಿದೆಡಬ್ಲ್ಯೂಐಪಿಒತಿಳಿಸಿದೆ.

ಭಾರತದ ಶ‌್ರೇಯಾಂಕ ವೃದ್ಧಿಯಲ್ಲಿ ನೀತಿ ಆಯೋಗ ಮಹತ್ವದ ಪಾತ್ರ ವಹಿಸಿದೆ ಎಂದೂ ಹೇಳಿದೆ.

ಕಳೆದ ವರ್ಷ ನೀತಿ ಆಯೋಗವುಭಾರತದ ನಾವೀನ್ಯತಾ ಸೂಚ್ಯಂಕ ಬಿಡುಗಡೆ ಮಾಡಿದ ಬಳಿ ಭಾರತದ ಎಲ್ಲ ರಾಜ್ಯಗಳೂ ನಾವೀನ್ಯತೆ ಸುಧಾರಣೆಯತ್ತ ಪ್ರಮುಖ ಕ್ರಮಗಳನ್ನು ಕೈಗೊಂಡಿವೆ.

ನೀತಿ ಆಯೋಗವು ಮೊದಲ ಬಾರಿ ಬಿಡುಗಡೆಮಾಡಿದ್ದ‘ಭಾರತ ನಾವೀನ್ಯತಾ ಸೂಚ್ಯಂಕ–2019’ ಪಟ್ಟಿಯಲ್ಲಿ ಕರ್ನಾಟಕ,ತಮಿಳುನಾಡು ಮತ್ತು ಮಹಾರಾಷ್ಟ್ರ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT