ಶಿಮ್ಲಾ (ಪಿಟಿಐ): ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂಕುಸಿತ ಪ್ರಮಾಣ ಏಳು ಪಟ್ಟು ಹೆಚ್ಚಾಗಿದೆ. 2020ರಲ್ಲಿ 16 ಬಾರಿ ಭೂಕುಸಿತ ಸಂಭವಿಸಿದರೆ, 2022ರಲ್ಲಿ 117 ಬಾರಿ ಭೂಮಿ ಕುಸಿದಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.

2022ರಲ್ಲಿ ಸಂಭವಿಸಿದ ಒಟ್ಟು ಭೂಕುಸಿತಗಳ ಪೈಕಿ ಕುಲ್ಲುವಿನಲ್ಲಿ 21 ಬಾರಿ ಭೂಮಿ ಕುಸಿದಿದೆ. ಮಂಡಿಯಲ್ಲಿ 20 ಬಾರಿ, ಲಹೌಲ್ ಮತ್ತು ಸ್ಪಿಟಿಯಲ್ಲಿ ತಲಾ 18 ಹಾಗೂ ಶಿಮ್ಲಾದಲ್ಲಿ 15 ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ.

‘ರಾಜ್ಯದಲ್ಲಿ 17,120 ಭೂಕುಸಿತ ಪೀಡಿತ ಸ್ಥಳಗಳಿವೆ. ಅತಿ ಹೆಚ್ಚು ಮಳೆ ಮತ್ತು ಬೆಟ್ಟದ ಇಳಿಜಾರು ಅಥವಾ ಬಂಡೆಗಳ ಸವೆಯುವಿಕೆಯು ಭೂಕುಸಿತ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ರಸ್ತೆ ಅಗಲೀಕರಣಕ್ಕಾಗಿ ಬೆಟ್ಟದ ಇಳಿಜಾರುಗಳನ್ನು ಕತ್ತರಿಸುವುದು ಹಾಗೂ ಸುರಂಗಗಳು, ಜಲ ಯೋಜನೆಗಳು ಮತ್ತು ಗಣಿಗಾರಿಕೆಗಾಗಿ ಸ್ಫೋಟಿಸುವುದೂ ಭೂಕುಸಿತ ಹೆಚ್ಚಳಕ್ಕೆ ಕಾರಣ’ ಎಂದು ಭೂವೈಜ್ಞಾನಿಕ ತಜ್ಞ ಪ್ರೊಫೆಸರ್ ವೀರೇಂದ್ರ ಸಿಂಗ್ ಧಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.