ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಮುಕೇಶ್, ನೀತಾ, ಆಕಾಶ್ ಅಂಬಾನಿಯನ್ನು ಕೊಲ್ಲುವುದಾಗಿ ಮತ್ತೆ ಬೆದರಿಕೆ ಕರೆ

Last Updated 6 ಅಕ್ಟೋಬರ್ 2022, 2:11 IST
ಅಕ್ಷರ ಗಾತ್ರ

ಮುಂಬೈ: ಉದ್ಯಮಿ ,ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಬಂದಿದೆ.

ಅಂಬಾನಿ ಒಡೆತನದ ಎಚ್‌.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಕಾಲ್ ಸೆಂಟರ್‌ಗೆ ಬುಧವಾರ ಬೆದರಿಕೆ ಕರೆ ಬಂದಿದೆ. ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಮತ್ತು ಮುಕೇಶ್, ಪತ್ನಿ ನೀತಾ ಹಾಗೂ ಮಗ ಆಕಾಶ್ ಅಂಬಾನಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಬುಧವಾರ ಮಧ್ಯಾಹ್ನ 12.57 ಮತ್ತು ಸಂಜೆ 5.04ರ ಸುಮಾರಿಗೆ ಎರಡು ಬಾರಿ ಕರೆ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೇಡ್‌ನ ವಕ್ತಾರರು ತಿಳಿಸಿದ್ದಾರೆ.

ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ.

ಮುಕೇಶ್ ಅಂಬಾನಿಯವರ ಭದ್ರತೆಯನ್ನು ‘ಝೆಡ್‌‘ನಿಂದ ‘ಝೆಡ್ ಪ್ಲಸ್‌‘ಗೆ ಏರಿಸಿದ 5 ದಿನಗಳ ನಂತರ ಈ ಬೆದರಿಕೆ ಕರೆ ಬಂದಿದೆ. ನೀತಾ ಅಂಬಾನಿಯವರಿಗೆ ‘ವೈ ಪ್ಲಸ್‘ ಭದ್ರತೆ ಇದೆ.

ಬೆದರಿಕೆ ಬೆನ್ನಲ್ಲೇ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಅಂಬಾನಿ ಕುಟುಂಬಕ್ಕೆ ಹೆಚ್ಚುವರಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ಕಳೆದ 50 ದಿನಗಳಲ್ಲಿ ಎರಡನೇ ಬಾರಿಗೆ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಒಡ್ಡಲಾಗಿದೆ.

ಆಗಸ್ಟ್ 15ರಂದು ಆಸ್ಪತ್ರೆಗೆ 8 ಬೆದರಿಕೆ ಕರೆಗಳು ಬಂದಿದ್ವು. ಬಳಿಕ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT