ಶನಿವಾರ, ಫೆಬ್ರವರಿ 4, 2023
17 °C

ಪಶ್ಚಿಮ ಬಂಗಾಳದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಪಶ್ಚಿಮ ಬಂಗಾಳದಲ್ಲಿ ₹ 1,082 ಕೋಟಿ ಮೌಲ್ಯದ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಚಾಲನೆ ನೀಡಿದ್ದಾರೆ.

ದಾಲ್ಕೋಲ ಜನತೆಯ 60 ವರ್ಷಗಳ ಬೇಡಿಕೆ ಪೂರೈಸಲಾಗುತ್ತಿದೆ. 5 ಕಿ.ಮೀ ಮತ್ತು 4 ಲೇನ್‌ ಬೈಪಾಸ್‌ ಅನ್ನು ₹120 ಕೋಟಿ ಮೌಲ್ಯದಲ್ಲಿ ನಿರ್ಮಿಸಲಾಗಿದ್ದು ದಾಲ್ಕೋಲದ ಸಂಚಾರ ಸಮಸ್ಯೆ ನಿವಾರಿಸಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಬೈಪಾಸ್‌ ನಿರ್ಮಾಣದಿಂದ ಕೋಲ್ಕತ್ತದಿಂದ ಸಿಲುಗುರಿ ಪ್ರಯಾಣ ಸಮಯ 2 ಗಂಟೆಯಷ್ಟು ಕಡಿಮೆಯಾಗಲಿದೆ. ಬಾಂಗ್ಲಾದೇಶ, ಭೂತಾನ್‌, ನೇಪಾಳ ಗಡಿ ಭಾಗದ ಸಂಚಾರವನ್ನು ಸುಧಾರಿಸಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ರಾಣಿಗಂಜ್‌ನಿಂದ ದಾಲ್ಕೋಲ ಹೆದ್ದಾರಿಯನ್ನು ₹962 ಕೋಟಿ ಮೌಲ್ಯದಲ್ಲಿ ನಿರ್ಮಿಸಲಾಗಿದ್ದು, ಪಶ್ಚಿಮ ಮೇದಿನಿಪುರದಿಂದ ಬಾಂಗ್ಲಾದೇಶದ ಗಡಿವರೆಗಿನ ಸಂಪರ್ಕ ಸುಧಾರಿಸಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು