ಸೋಮವಾರ, ಆಗಸ್ಟ್ 8, 2022
24 °C

ಹಲಸಿನ ಕಾಯಿ ಹಿಟ್ಟಿನಿಂದ ಟೈಪ್‌ 2 ಮಧುಮೇಹ ನಿಯಂತ್ರಣ: ಹೊಸ ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ: ಹಲಸಿನ ಕಾಯಿ (ಹಣ್ಣಾಗಿರದ, ಬಲಿತ ಹಲಸು) ಹಿಟ್ಟು ಟೈಪ್ 2 ಮಧುಮೇಹ ನಿಯಂತ್ರಿಸಲು ಸಹಾಯ ಮಾಡಲಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ದೈನಂದಿನ ಊಟದಲ್ಲಿ ಒಂದು ಚಮಚ ಅಕ್ಕಿ ಅಥವಾ ಗೋಧಿ ಹಿಟ್ಟಿನ ಜತೆಗೆ ಹಲಸಿನ ತೊಳೆಯನ್ನು ಬಳಸಿ ಮಾಡಿದ ಹಿಟ್ಟನ್ನು ಬಳಸಿದರೆ ಟೈಪ್ 2 ಡಯಾಬಿಟಿಸ್ ರೋಗಿಗಳಲ್ಲಿ ಪ್ಲಾಸ್ಮಾ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪರಿಣಾಮಕಾರಿಯಾಗಿದೆ ಎಂದು ಈ ಹೊಸ ಅಧ್ಯಯನ ತಿಳಿಸಿದೆ.

ಈ ಅಧ್ಯಯನ ವರದಿಯು ಪ್ರತಿಷ್ಠಿತ ‘ನೇಚರ್’ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಟೈಪ್ 2 ಮಧುಮೇಹ ರೋಗಿಗಳಿಗೆ ಹಲಸಿನ ಕಾಯಿ ಹಿಟ್ಟಿನೊಂದಿಗೆ ತಯಾರಿಸಿದ ಪೂರಕ ಆಹಾರ ನೀಡಿದಾಗ 12ನೇ ವಾರದಲ್ಲಿ ಗ್ಲೈಕೋಸೈಲೇಟೆಡ್ ಹಿಮೋಗ್ಲೋಬಿನ್ (ಎಚ್‌ಬಿಎ1ಸಿ) ಸರಾಸರಿ ಮಟ್ಟವು ಪರಿಣಾಮಕಾರಿ ಮಟ್ಟದಲ್ಲಿ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ಈ ಅಧ್ಯಯನ ಹೇಳಿದೆ.

ಎ.ಗೋಪಾಲ್ ರಾವ್, ಕೆ. ಸುನಿಲ್ ನಾಯಕ್, ಎ.ಜಿ. ಉನ್ನಿಕೃಷ್ಣನ್ ಮತ್ತು ಜೇಮ್ಸ್ ಜೋಸೆಫ್ ಅವರು ಈ ಅಧ್ಯಯನ ನಡೆಸಿದ್ದಾರೆ. ಹಲಸಿನ ಹಿಟ್ಟಿನ ಪರಿಣಾಮವನ್ನು ಈ ತಂಡ ಮೌಲ್ಯಮಾಪನ ಮಾಡಿದೆ.

‘ಈ ವರ್ಷದ ಜನವರಿಯಲ್ಲಿ ಸ್ಟಾರ್ಟ್ ಅಪ್ ಇಂಡಿಯಾ ಸಮಾವೇಶ ಫ್ರಾರಂಬ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ನನ್ನ ಎರಡು ನಿಮಿಷಗಳ ಸಂವಾದದ ನಂತರ ಈ ಉತ್ಪನ್ನ ಭಾರತದಲ್ಲಿ ಜನಪ್ರಿಯವಾಯಿತು. ಪ್ರಸ್ತುತ ಅಮೆಜಾನ್‌ನಲ್ಲಿ ಹಲಸಿನ ಹಿಟ್ಟು, ಹಿಟ್ಟು ವಿಭಾಗದಲ್ಲಿ ಅತ್ಯುತ್ತಮವಾಗಿ ಮಾರಾಟವಾಗುತ್ತಿದ್ದು, ಗೋಧಿ ಹಿಟ್ಟನ್ನು ಹಿಂದಿಕ್ಕಿದೆ’ ಎಂದು ಜೇಮ್ಸ್ ಜೋಸೆಫ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು