ಕೋಲ್ಕತ್ತ: ರಕ್ಷಣಾ ವಲಯದ ಸರ್ಕಾರಿ ಸ್ವಾಮ್ಯದ ಉದ್ಯಮ (ಪಿಎಸ್‌ಯು) ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ (ಜಿಆರ್‌ಎಸ್‌ಇ), ಭಾರತೀಯ ನೌಕಾಪಡೆಗೆ ಎಂಟನೇ ‘ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ’(ಎಲ್‌ಸಿಯು) ನೌಕೆಯನ್ನು ಶುಕ್ರವಾರ ಹಸ್ತಾಂತರಿಸಿದೆ. ಈ ಯುದ್ಧನೌಕೆಯು ದೇಶದ ರಕ್ಷಣಾ ಸನ್ನದ್ಧತೆಗೆ ಮತ್ತಷ್ಟು ಬಲ ತುಂಬಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ದಕ್ಷಿಣ ಚೀನಾ ಸಮುದ್ರಕ್ಕೆ ಸಾಗುವ ಮಾರ್ಗಕ್ಕೆ ಸಮೀಪವಿರುವ ಅಂಡಮಾನ್ ನಿಕೊಬಾರ್ ದ್ವೀಪದ ಸಮೀಪ ಈ ನೌಕೆಯನ್ನು ನಿಯೋಜಿಸಲಾಗಿದೆ. ‘ಸಂಕೀರ್ಣವಾದ ಕರಾವಳಿ ತೀರದಲ್ಲೂ ಲ್ಯಾಂಡಿಂಗ್ ಕಾರ್ಯಾಚರಣೆ ನಡೆಸುವಂತೆ ಈ ಹಡಗನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ಜಿಆರ್‌ಎಸ್‌ಇ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ನಿವೃತ್ತ ರಿಯರ್ ಅಡ್ಮಿರಲ್ ವಿ.ಕೆ.ಸಕ್ಸೇನಾ ಹೇಳಿದರು. ‘ಕೋವಿಡ್–19 ಪಿಡುಗು ಹಾಗೂ ಲಾಕ್‌ಡೌನ್ ನಡುವೆಯೂ ಕೋಲ್ಕತ್ತ ಮೂಲದ ಜಿಆರ್‌ಎಸ್‌ಇ, ಯಶಸ್ವಿಯಾಗಿ ಎಂಟನೇ ಎಲ್‌ಸಿಯು ನಿರ್ಮಾಣ ಮಾಡಿ ಭಾರತೀಯ ನೌಕಾಪಡೆಗೆ ನೀಡಿದೆ’ ಎಂದರು.

ಈ ನೌಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವಿದ್ದು, ಶೇ 90ರಷ್ಟು ಭಾಗಗಳು ಭಾರತದಲ್ಲೇ ತಯಾರಾಗಿವೆ. ಯೋಧರ ಜೊತೆಗೆ, ಪ್ರತಿಯೊಂದು ಎಲ್‌ಸಿಯು, ಯುದ್ಧ ಟ್ಯಾಂಕ್‌ಗಳನ್ನು, ಸೇನಾ ವಾಹನಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದು, ಕಡಲ ತೀರದವರೆಗೂ ಬಂದು ಇವುಗಳನ್ನು ಇಳಿಸುತ್ತವೆ. 216 ಜನರು ಈ ನೌಕೆಯಲ್ಲಿ ಇರುವಷ್ಟು ಸ್ಥಳಾವಕಾಶವಿದ್ದು, ಲ್ಯಾಂಡಿಂಗ್ ಕಾರ್ಯಾಚರಣೆ ವೇಳೆ ರಕ್ಷಣೆಗಾಗಿ ಎರಡು ಸ್ವದೇಶಿ ನಿರ್ಮಿತ ಸಿಆರ್‌ಎನ್ 91 ಗನ್‌ಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.