ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಬಾ: ಡಿಜಿಪಿಗೆ ಎನ್‌ಜಿಒದಿಂದ ನೋಟಿಸ್‌

Last Updated 7 ಅಕ್ಟೋಬರ್ 2022, 13:56 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ಗರ್ಬಾ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕಲ್ಲು ತೂರಿದ ಮುಸ್ಲಿಂ ಯುವಕರನ್ನು ಪೊಲೀಸರು ಸಾರ್ವಜನಿಕವಾಗಿ ಥಳಿಸಿದ ವಿಷಯಕ್ಕೆ ಸಂಬಂಧಿಸಿ ಎನ್‌ಜಿಒವೊಂದು ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಶ್‌ ಮಹಾನಿರ್ದೇಶರಿಗೆ ಗುರುವಾರ ನೋಟಿಸ್‌ ನೀಡಿದೆ.

ಮೈನಾರಿಟಿ ಕೋಆರ್ಡಿನೇಷನ್‌ ಕಮಿಟಿಯ (ಎಂಸಿಸಿ) ಸಂಚಾಲಕ ಮುಜಾಹಿದ್‌ ನಫೀಸ್‌ ಅವರು ನೋಟಿಸ್‌ ನೀಡಿದ್ದಾರೆ.

‘ಯುವಕರನ್ನು ಥಳಿಸಿದ ಪೊಲೀಸರ ವಿರುದ್ಧ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು. ಪೊಲೀಸ್‌ ಇಲಾಖೆಯ ಸಂಹಿತೆ ಅನುಗುಣವಾಗಿ ದಂಡನೀಯ ಶಿಕ್ಷೆ ವಿಧಿಸಬೇಕು’ ಎಂದುನಫೀಸ್‌ ನೋಟಿಸ್‌ನಲ್ಲಿ ಹೇಳಿದ್ದಾರೆ.

‘ಇಲ್ಲಿಯವರೆಗೆ ಇಲಾಖೆಯು ಈ ಪೊಲೀಸರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ವೇಳೆ ಇಲಾಖೆಯು ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ, ಈ ಪೊಲೀಸರ ವಿರುದ್ಧ ನಾನೇ ಕಾನೂನು ರೀತಿಯಲ್ಲಿ ಸೂಕ್ತ ಕ್ರಮಕೈಗೊಳ್ಳುತ್ತೇನೆ’ ಎಂದಿದ್ದಾರೆ.

‘ಈ ರೀತಿ ಸಾರ್ವಜನಿಕವಾಗಿ ಥಳಿಸುವುದು ವ್ಯಕ್ತಿ ಸ್ವಾತಂತ್ರ್ಯ ಹತ್ಯೆ. ಜೊತೆಗೆ, ನಾಗರಿಕ ಸಮಾಜದ ಸಾಂವಿಧಾನಿಕ ಸ್ಪೂರ್ತಿಗೆ ಧಕ್ಕೆ ತರುವಂತ ಕೆಲಸವಾಗಿದೆ’ ಎಂದರು.

‘ಸಾರ್ವಜನಿಕವಾಗಿ ಯುವಕರನ್ನು ಥಳಿಸಿದ ಪೊಲೀಸರು ಕೂಡ ಅಪರಾಧ ಪ್ರಕ್ರಿಯಾ ಸಂಹಿತೆಗೆ ಬದ್ಧರಾಗಿರಬೇಕು. ಯಾವುದೇ ವ್ಯಕ್ತಿಯನ್ನು ಹೊಡೆಯುವ ಮತ್ತು ಬೆದರಿಸುವ ಹಕ್ಕು ಪೊಲೀಸರಿಗೆ ಇಲ್ಲ. ನಾಗರಿಕರ ಮೇಲೆ ಅಮಾನವೀಯವಾಗಿ ದಾಳಿ ನಡೆಸಬಹುದು ಎಂದು ಭಾರತೀಯ ದಂಡ ಸಂಹಿತೆಯಲ್ಲಾಗಲೀ ಪೊಲೀಸ್‌ ಅಪರಾಧ ಸಂಹಿತೆಯಲ್ಲಾಗಲೀ ಇಲ್ಲ’ ಎಂದರು.

ಖೇಡಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಗರ್ಬಾ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಸ್ಥಳದ ಪಕ್ಕದಲ್ಲೇ ಮಸೀದಿ ಇತ್ತು. ಕೆಲವು ಮುಸ್ಲಿಂ ಯುವಕರು ಕಾರ್ಯಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕಲ್ಲು ತೂರಿದ್ದರು. ಈ ವೇಳೆ ಈ ಯುವಕರನ್ನು ಪೊಲೀಸರು ಸಾರ್ವಜನಿಕವಾಗಿ ಥಳಿಸಿ, ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT