ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್: ಕೋವಿಡ್ ಲಸಿಕೆ ಪಡೆಯದ ವ್ಯಾಪಾರಿ ಬಂಧನ

ಕೋವಿಡ್ ಮಾರ್ಗಸೂಚಿ ಪಾಲಿಸಲು ವಿಫಲ: ಎಫ್‌ಐಆರ್ ದಾಖಲು
Last Updated 20 ಜುಲೈ 2021, 11:49 IST
ಅಕ್ಷರ ಗಾತ್ರ

ಅಹಮದಾಬಾದ್: ಕೋವಿಡ್ ಲಸಿಕೆಯನ್ನು ಪಡೆಯದ ಕಾರಣ ವ್ಯಾಪಾರಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಈಚೆಗೆ ನಡೆದಿದೆ.

ಬಂಧಿತ ವ್ಯಾಪಾರಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ನಿಗದಿತ ಗಡುವಿನೊಳಗೆ ಕೋವಿಡ್ ಲಸಿಕೆ ಪಡೆಯದೇ ಜಿಲ್ಲಾಧಿಕಾರಿಯ ಆದೇಶ ಉಲ್ಲಂಘಿಸುವ ಕುರಿತು ದೂರು ದಾಖಲಾಗಿದೆ.

ಜುಲೈ 9ರಂದು ಜಿಲ್ಲಾಧಿಕಾರಿಯು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಹೋಟೆಲ್‌ಗಳು, ಮಾಲ್‌ಗಳು, ಪಡಿತರ ಅಂಗಡಿಗಳು, ಸಲೂನ್‌ಗಳು ಮತ್ತು ರೆಸ್ಟೋರೆಂಟ್‌ ನಡೆಸುವಂಥವರು ಜುಲೈ 31ರೊಳಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆಯಬೇಕೆಂದು ಸೂಚಿಸಲಾಗಿದೆ.

‘ವ್ಯಾಪಾರಿಯು ತನ್ನ ವ್ಯಾಪಾರದ ಸ್ಥಳದಲ್ಲಿ ದೈಹಿಕ ಅಂತರ ಕಾಪಾಡಿಕೊಂಡಿರಲಿಲ್ಲ. ಮಾಸ್ಕ್ ಕೂಡಾ ಧರಿಸಿರಲಿಲ್ಲ. ಇದು ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆ. ಹಾಗಾಗಿ ಅವರನ್ನು ಬಂಧಿಸಲಾಗಿದೆಯೇ ಹೊರತು ಲಸಿಕೆ ತೆಗೆದುಕೊಂಡಿಲ್ಲ ಅನ್ನುವ ಕಾರಣಕ್ಕಾಗಿ ಅಲ್ಲ’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ಸಾಗಥಿಯಾ ತಿಳಿಸಿದ್ದಾರೆ.

‘ಜುಲೈ 17ರಂದು ಗಸ್ತಿನಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ಉಡೆಸಿನ್ ಠಾಕೋರ್ ಅವರು, ಅಂಗಡಿಯೊಂದರ ಮುಂದೆ ಹಲವು ಗ್ರಾಹಕರು ಒಟ್ಟಾಗಿ ನಿಂತಿರುವುದನ್ನು ಕಂಡಿದ್ದರು. ಅಂಗಡಿಯಾತನಿಗೆ ಕೋವಿಡ್ ಮೊದಲ ಡೋಸ್ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದಾಗ ಆತ ಇಲ್ಲವೆಂದು ಹೇಳಿದ್ದರು. ಇದಕ್ಕೆ ಸೂಕ್ತ ಕಾರಣವನ್ನೂ ನೀಡಿರಲಿಲ್ಲ. ಹಾಗಾಗಿ, ವ್ಯಾಪಾರಿಯ ವಿರುದ್ಧ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯ ದೂರು ದಾಖಲಿಸಿ, ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT