ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ವಿಧಾನಸಭೆ ಶೇ 59.24ರಷ್ಟು ಮತದಾನ

Last Updated 1 ಡಿಸೆಂಬರ್ 2022, 19:38 IST
ಅಕ್ಷರ ಗಾತ್ರ

ಅಹಮದಾಬಾದ್‌ :ಗುಜರಾತ್‌ ವಿಧಾನಸಭೆಯ 89 ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನವು ಬಹುತೇಕ ಶಾಂತಿಯುತವಾಗಿತ್ತು. ಸಂಜೆ ಐದರ ವೇಳೆಗೆ ಶೇ 59.24ರಷ್ಟು ಮತದಾನ ದಾಖಲಾಗಿತ್ತು. ಇದು ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ವಾಗಿದ್ದು, ಎರಡನೇ ಹಂತದ ಮತದಾನ 5ರಂದು ನಡೆಯಲಿದೆ.

ಸಂಜೆ ಐದರ ನಂತರವೂ ಹಲವು ಮಂದಿ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆ ಎದುರು ಸರದಿಯಲ್ಲಿ ಇದ್ದರು. ಹೀಗಾಗಿ ಒಟ್ಟು ಮತದಾನದ ಪ್ರಮಾಣ ಹೆಚ್ಚಾಗಲಿದೆ. ಈ ಬಾರಿ ತಾಪಿ ಜಿಲ್ಲೆಯಲ್ಲಿ ಗರಿಷ್ಠ ಶೇ 72ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗವು ಹೇಳಿದೆ.

ಕಾಂಗ್ರೆಸ್‌ ದೂರು: ‘ಚುನಾವಣಾ ಕರ್ತವ್ಯಕ್ಕೆ ತ್ರಿಪುರಾ ಸ್ಟೇಟ್‌ ರೈಫಲ್ಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಆದರೆ, ಮತಗಟ್ಟೆಗಳತ್ತ ಸುಳಿಯಬೇಡಿ ಎಂದು ಅವರಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಮತಯಂತ್ರಗಳನ್ನು ಗುಜರಾತ್ ಪೊಲೀಸರೇ ನಿರ್ವಹಣೆ ಮಾಡುತ್ತಿದ್ದಾರೆ. ಇದು ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಯಬೇಕು ಎಂಬುದರ ಉಲ್ಲಂಘನೆ’
ಎಂದು ಚುನಾವಣಾ ಆಯೋಗಕ್ಕೆಕಾಂಗ್ರೆಸ್‌ ದೂರು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT