ಗುಜರಾತ್: 45 ಮಂದಿ ಹೊಸಬರಿಗೆ ಟಿಕೆಟ್ ನೀಡಿದ್ದ ಬಿಜೆಪಿ, 43 ಮಂದಿಗೆ ಗೆಲುವು
ಈ ಚುನಾವಣೆಯಲ್ಲಿ ಕಳಂಕಿತರು, ಜನರ ಸಮಸ್ಯೆಗೆ ಸ್ಪಂದಿಸದವರು ಸೇರಿದಂತೆ ಹಲವು ಮಂದಿ ಹಾಲಿ ಶಾಸಕರನ್ನು ಬಿಜೆಪಿ ಕಣದಿಂದ ಹೊರಗಿಟ್ಟು, ಹೊಸಬರಿಗೆ ಟಿಕೆಟ್ ನೀಡುವ ಮೂಲಕ ಹೊಸ ಪ್ರಯೋಗ ಮಾಡಿತ್ತು. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ 45 ಹಾಲಿ ಶಾಸಕರನ್ನು ಬಿಟ್ಟು ಆ ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ನೀಡಿತ್ತು. ಇದರಲ್ಲಿ 43 ಮಂದಿ ಗೆಲುವು ಪಡೆಯುವ ಮೂಲಕ ಕಮಲ ಪಾಳಯದ ಪ್ರಯೋಗಕ್ಕೆ ಉತ್ತಮ ಫಲ ಸಿಕ್ಕಿದೆ.Last Updated 9 ಡಿಸೆಂಬರ್ 2022, 14:12 IST