ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Gujarat Results: 1.92 ಲಕ್ಷ ಮತಗಳ ಅಂತರದಿಂದ ಗೆದ್ದ ಸಿಎಂ ಭೂಪೇಂದ್ರ ಪಟೇಲ್

Last Updated 10 ಡಿಸೆಂಬರ್ 2022, 10:39 IST
ಅಕ್ಷರ ಗಾತ್ರ

ಘಟ್ಲೋಡಿಯಾ:ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಘಟ್ಲೋಡಿಯಾ ವಿಧಾನಸಭೆ ಕ್ಷೇತ್ರದಿಂದಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಪಟೇಲ್‌ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ.

ಪಟೇಲ್‌ ಅವರು2,12,480 ಮತ ಪಡೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿಅಮಿ ಯಾಜ್ನಿಕ್‌ ಅವರು ಕೇವಲ21,120 ಮತ ಗಳಿಸಿದ್ದು,1.92 ಲಕ್ಷ ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.ಮೂರನೇ ಸ್ಥಾನದಲ್ಲಿರುವ ಎಎಪಿ ಅಭ್ಯರ್ಥಿವಿಜಯ್‌ ಪಟೇಲ್‌ ಅವರು 15,902 ಮತ ಗಳಿಸಿದ್ದಾರೆ.

ಪಾಟಿದಾರ್‌ ಸಮುದಾಯದ ಪ್ರಾಬಲ್ಯವಿರುವ ಹಾಗೂ ಗಾಂಧಿನಗರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಘಟ್ಲೋಡಿಯಾ,ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್‌ ಪಟೇಲ್‌ ಕೂಡ ಇಲ್ಲಿಯವರೇ.

ಪಾಟಿದಾರ್‌ ಮೀಸಲಾತಿ ಹೋರಾಟದ ನಡುವೆಯೂ 2017ರ ಚುನಾವಣೆಯಲ್ಲಿ ಭೂಪೆಂದ್ರ ಪಟೇಲ್‌ ಅವರು1.17 ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದರು.

ಘಟ್ಲೋಡಿಯಾದಲ್ಲಿ ಒಟ್ಟು 3.70 ಲಕ್ಷ ಮತದಾರರಿದ್ದಾರೆ. ಈ ಮೊದಲು ಸರ್ಖೆಜ್‌ ವಿಧಾನಸಭೆಗೆ ಸೇರಿದ್ದ ಈ ಕ್ಷೇತ್ರವನ್ನು 2012ರಲ್ಲಿ ವಿಭಜಿಸಲಾಗಿತ್ತು. ಆಗ ಆನಂದಿಬೆನ್‌ ಪಟೇಲ್‌ ಅವರು 1.1 ಲಕ್ಷ ಮತಗಳ ಅಂತರಿದಿಂದ ಜಯಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT