ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್: ಮತಾಂತರಕ್ಕಾಗಿ ಮದುವೆಗೆ ಗರಿಷ್ಠ 10 ವರ್ಷ ಸಜೆ, ರಾಜ್ಯಪಾಲರ ಅಸ್ತು

Last Updated 22 ಮೇ 2021, 17:57 IST
ಅಕ್ಷರ ಗಾತ್ರ

ಅಹಮದಾಬಾದ್: ಮತಾಂತರ ಉದ್ದೇಶದಿಂದ ಬಲವಂತವಾಗಿ ಮದುವೆಯಾಗುವ ಪ್ರಕರಣಗಳಲ್ಲಿ ಆರೋಪ ಸಾಬೀತಾದಲ್ಲಿ ಗರಿಷ್ಠ10 ವರ್ಷ ಸಜೆ ವಿಧಿಸಲು ಅವಕಾಶವಿರುವ ಮಸೂದೆಗೆ ಗುಜರಾತ್‌ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಗುಜರಾತ್‌ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಮಸೂದೆ 2021 ಅನ್ನು ರಾಜ್ಯ ವಿಧಾನಸಭೆ ಈ ವರ್ಷದ ಏಪ್ರಿಲ್‌ 1ರಂದು ಅಂಗೀಕರಿಸಿತ್ತು. ಇದರ ಜೊತೆಗೆ ಇನ್ನೂ ಏಳು ಮಸೂದೆಗಳನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು.

ಉದ್ದೇಸಿತ ಮಸೂದೆಯ ಪ್ರಕಾರ, ಮತಾಂತರ ಉದ್ದೇಶದಿಂದ ಮದುವೆ ಪ್ರಕರಣಗಳಲ್ಲಿ ಕನಿಷ್ಠ 3 ರಿಂದ ಐದು ವರ್ಷ ಸಜೆ ಹಾಗೂ ₹ 2 ಲಕ್ಷ ದಂಡ ವಿಧಿಸಲು ಅವಕಾಶವಿದೆ. ಸಂತ್ರಸ್ತೆ ಬಾಲಕಿ, ದಲಿತ ಮಹಿಳೆಯಾಗಿದ್ದಲ್ಲಿ ತಪ್ಪಿತಸ್ಥರಿಗೆ 4 ರಿಂದ7 ವರ್ಷ ಸಜೆ ಹಾಗೂ ₹ 3 ಲಕ್ಷವರೆಗೂ ದಂಡ ವಿಧಿಸಲು ಅವಕಾಶವಿದೆ. ಒಂದು ವೇಳೆ ಯಾವುದೇ ಸಂಸ್ಥೆ ಕಾನೂನು ಉಲ್ಲಂಘಿಸಿಲ್ಲಿ ಸಂಸ್ಥೆಯ ಮುಖ್ಯಸ್ಥರಿಗೆ ಕನಿಷ್ಠ 3 ವರ್ಷ, ಗರಿಷ್ಠ 10 ವರ್ಷ ಸಜೆ ವಿಧಿಸಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT