ಮಂಗಳವಾರ, ಸೆಪ್ಟೆಂಬರ್ 21, 2021
20 °C

ಗುಜರಾತ್‌: ಎರಡು ದಿನಗಳಲ್ಲಿ ಸಚಿವರ ಪ್ರಮಾಣ–ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಗುಜರಾತ್‌ ಸಚಿವ ಸಂಪುಟವು ಎರಡು ದಿನಗಳಲ್ಲಿ ರಚನೆ ಆಗಲಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.  

‘ವಿಜಯ ರೂಪಾಣಿ ಅವರು ಹುದ್ದೆ ತೊರೆದ ನಂತರ  ಭೂಪೇಂದ್ರ ಪಟೇಲ್‌ (59) ಅವರು ಸೋಮವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಚರ್ಚೆಗಳು ನಡೆಯುತ್ತಿದ್ದು ಬುಧವಾರ ಅಥವಾ ಗುರುವಾರ ಉಳಿದವರ ಪ್ರಮಾಣವಚನ ನಡೆಯಲಿದೆ’ ಎಂದು ಬಿಜೆಪಿ ವಕ್ತಾರ ಯಮಲ್‌ ವ್ಯಾಸ್ ಮಂಗಳವಾರ ತಿಳಿಸಿದ್ದಾರೆ. 

ರೂಪಾಣಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ನಿತಿನ್‌ ಪಟೇಲ್‌ ಅವರನ್ನು ಹೊಸ ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳಲಾಗುವುದೇ ಎಂಬ ಬಗ್ಗೆ ರಾಜ್ಯ ಬಿಜೆಪಿ ವಲಯಗಳಲ್ಲಿ ಊಹಾಪೋಹಗಳಿವೆ. 

ಸಾಧ್ಯವಾದಷ್ಟು ಮಟ್ಟಿಗೆ ಹಿರಿಯ ನಾಯಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು