ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

2023ರ ಮಾರ್ಚ್‌ ವೇಳೆಗೆ ಗುಜರಾತ್‌ನಲ್ಲೂ ಉಚಿತ ವಿದ್ಯುತ್‌: ಭಗವಂತ್‌ ಮಾನ್‌

Last Updated 30 ನವೆಂಬರ್ 2022, 15:32 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ಗೆಲುವು ಸಾಧಿಸಲಿದೆ ಎಂದುಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿಮಾತನಾಡಿದ ಅವರು, ‘ಗುಜರಾತ್‌ನಲ್ಲಿ 2023ರಮಾರ್ಚ್‌ ವೇಳೆಗೆ ಉಚಿತ ವಿದ್ಯುತ್ ನೀಡಲಾಗುವುದು’ಎಂದು ಹೇಳಿದರು.

‘ಈ ಹಿಂದೆ ಎಎಪಿ ಉಚಿತ ವಿದ್ಯುತ್ ನೀಡುವುದಾಗಿ ದೆಹಲಿಯಲ್ಲಿ ಭರವಸೆ ನೀಡಿತ್ತು.ಆ ಸಮಯದಲ್ಲಿ ನೀವು ಅದನ್ನು ಹೇಗೆ ಮಾಡುತ್ತೀರಿ ಎಂದು ಪ್ರತಿಪಕ್ಷದವರುಪ್ರಶ್ನಿಸಿದ್ದರು.ಆದರೆ, ನಾವು ಕೊಟ್ಟಿದ್ದ ಭರವಸೆಯನ್ನುಈಡೇರಿಸಿದ್ದೇವೆ. ಜತೆಗೆ,ಪಂಜಾಬ್‌ನಲ್ಲಿ ಅದೇ ಪರಿಸ್ಥಿತಿ. ಗುಜರಾತ್‌ನಲ್ಲೂ ನಾವು ಮಾರ್ಚ್‌ನಿಂದ ಜನರಿಗೆ ಉಚಿತ ವಿದ್ಯುತ್ ನೀಡುತ್ತೇವೆ’ಎಂದುಮಾನ್ತಿಳಿಸಿದರು.

ನಿಮ್ಮ ಖಾತೆಗಳಿಗೆ ₹15 ಲಕ್ಷ ಹಣ ಹಾಕುತ್ತೇವೆ ಎಂದು ಬಿಜೆಪಿಯವರಂತೆ ನಾವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಜನರಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳನ್ನು ಎಎಪಿ ಜಾರಿಗೊಳಿಸಲಿದೆ ಎಂದು ಮಾನ್ ಹೇಳಿದರು.

ಕೆಲವರು ಎಎಪಿಯನ್ನು ಬಿಜೆಪಿಯ ‘ಬಿ ಟೀಮ್’ ಎಂದು ಹೇಳುತ್ತಾರೆ. ಇನ್ನು ಕೆಲವರು ಕಾಂಗ್ರೆಸ್‌ನ ‘ಬಿ ಟೀಮ್’ ಎಂದು ಕರೆಯುತ್ತಾರೆ. ಆದರೆ, ನಾವು 130 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ‘ಎ ಟೀಮ್’ ಆಗಿ ಹೊರಹೊಮ್ಮುತ್ತೇವೆ. ಗುಜರಾತ್‌ನಲ್ಲಿ ನಾವೇ ಸರ್ಕಾರ ರಚಿಸುತ್ತೇವೆ ಎಂದರು.

ಗುಜರಾತ್‌ ವಿಧಾನಸಭೆಗೆ ಮೊದಲ ಹಂತದಲ್ಲಿ ಡಿ.1ರಂದು ಮತದಾನ ನಡೆಯಲಿರುವ 89 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಮಂಗಳವಾರ ಅಂತ್ಯಗೊಂಡಿದೆ. ದಕ್ಷಿಣ ಗುಜರಾತ್‌ ಮತ್ತು ಕಛ್‌–ಸೌರಾಷ್ಟ್ರದ 19 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಸಾಂಪ್ರದಾಯಿಕವಾಗಿ ಈ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇತ್ತು. ಈ ಬಾರಿ ಆಮ್‌ ಆದ್ಮಿ ಪಕ್ಷ ಕೂಡ ಕಣದಲ್ಲಿ ಇದೆ. ಪಕ್ಷವು 182 ಕ್ಷೇತ್ರಗಳ ಪೈಕಿ 181ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಹಾಗಾಗಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪ‍ಡುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT