ಮಂಗಳವಾರ, ಜನವರಿ 31, 2023
18 °C

ಗುಜರಾತ್‌: ತೆರೆದ ಬಾವಿಗೆ ಬಿದ್ದು ಎರಡು ಸಿಂಹಗಳು ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಅಮ್ರೇಲಿ: ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ 5 ವರ್ಷದ ಗಂಡು ಸಿಂಹ ಮತ್ತು 9 ವರ್ಷದ ಸಿಂಹಿಣಿ ತೆರೆದ ಬಾವಿಗೆ ಬಿದ್ದು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಖಂಭ ತಾಲ್ಲೂಕಿನ ಕೊಟ್ಡಾ ಗ್ರಾಮದ ರೈತರೊಬ್ಬರಿಗೆ ಸೇರಿದ ಬಾವಿಗೆ ಸಿಂಹಗಳೆರಡು ಆಕಸ್ಮಿಕವಾಗಿ ಬಿದ್ದು ಮುಳುಗಿ ಮೃತಪಟ್ಟಿವೆ ಎಂದು ಗಿರ್‌ ಅರಣ್ಯ ಸಂರಕ್ಷಣಾಧಿಕಾರಿ ರಾಜ್‌ದೀಪ್‌ಸಿಂಗ್‌ ಜಾಲಾ ಹೇಳಿದರು.

ಘಟನೆ ನಡೆದಿರುವುದು ತಿಳಿದುಬಂದ ಕೂಡಲೇ ಬಾವಿಯ ಮಾಲೀಕ ಮಾಹಿತಿ ನೀಡಿದರು. ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿತು. ಆದರೆ ಆಗಲೇ ಸಿಂಹಗಳೆರಡು ಮುಳುಗಿದ್ದವು. ಅವುಗಳ ಮೃತದೇಹವನ್ನು ಬಾವಿಯಿಂದ ಹೊರಗೆ ತೆಗೆದು ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಜ್‌ದೀಪ್‌ಸಿಂಗ್‌ ಜಾಲಾ ತಿಳಿಸಿದರು.

2007-08ರಿಂದ ಗಿರ್‌ ಅರಣ್ಯದ ಪೂರ್ವ ಭಾಗಕ್ಕೆ ಸೇರಿದ ಅಮ್ರೇಲಿ ಮತ್ತು ಸೋಮನಾಥ ಜಿಲ್ಲೆಗಳಲ್ಲಿ ಸುಮಾರು 11,748 ಬಾವಿಗಳಿಗೆ ವನ್ಯಜೀವಿಗಳು ಬೀಳದಂತೆ ಅಡ್ಡಗೋಡೆಗಳನ್ನು ನಿರ್ಮಿಸಲಾಗಿದೆ. ಆದರೆ ಹೊಸದಾಗಿ ಬಾವಿಗಳನ್ನು ನಿರ್ಮಿಸುವ ಪ್ರಕ್ರಿಯೆಗಳು ನಿರಂತರವಾಗಿದೆ ಎಂದು ರಾಜ್‌ದೀಪ್‌ಸಿಂಗ್‌ ಜಾಲಾ ಹೇಳಿದರು.

ಡಿಸೆಂಬರ್‌ 2021ರ ವರೆಗೆ ಹಿಂದಿನ ಎರಡು ವರ್ಷಗಳಲ್ಲಿ ಒಟ್ಟು 283 ಸಿಂಹಗಳು ಮೃತಪಟ್ಟಿರುವುದಾಗಿ ಕಳೆದ ವರ್ಷ ಮಾರ್ಚ್‌ನಲ್ಲಿ ಅರಣ್ಯ ಸಚಿವ ಕಿರಿಟ್‌ಸಿಂಗ್‌ ರಾಣಾ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದರು. ಈ ಪೈಕಿ ಬಾವಿಗೆ ಬಿದ್ದು ಅಥವಾ ರೈಲು, ವಾಹನಗಳ ಅಡಿಗೆ ಸಿಕ್ಕಿ 21 ಸಿಂಹಗಳು ಮೃತಪಟ್ಟಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು