ಸೋಮವಾರ, ಜುಲೈ 4, 2022
25 °C

ಜ್ಞಾನವಾಪಿ ಪ್ರಕರಣ: ವಿಚಾರಣೆ 30ಕ್ಕೆ ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾರಾಣಸಿ: ಜ್ಞಾನವಾಪಿ- ಶೃಂಗಾರ್ ಗೌರಿ ಸಂಕೀರ್ಣ ಪ್ರಕರಣದ ಕುರಿತು ಗುರುವಾರ ಮುಸ್ಲಿಂ ಪರ ವಾದವನ್ನು ಆಲಿಸಿದ ಇಲ್ಲಿನ ಜಿಲ್ಲಾ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 30ರಂದು ನಿಗದಿಪಡಿಸಿದೆ.

‘ಪ್ರಕರಣದ ನಿರ್ವಹಣೆಯ ಕುರಿತು ಮುಸ್ಲಿಂ ಕಡೆಯ ವಾದಗಳು ಗುರುವಾರ ಅಪೂರ್ಣವಾಗಿವೆ. ಹಾಗಾಗಿ, ಮೇ 30ರಂದು ನಡೆಯುವ ವಿಚಾರಣೆಯಲ್ಲಿ ವಾದ ಮುಂದುವರಿಯಲಿದೆ’ ಎಂದು ಜಿಲ್ಲಾ ಸರ್ಕಾರಿ ವಕೀಲ ರಾಣಾ ಸಂಜೀವ್ ಸಿಂಗ್ ಮಾಹಿತಿ ನೀಡಿದ್ದಾರೆ.

ಜ್ಞಾನವಾಪಿ- ಶೃಂಗಾರ್ ಗೌರಿ ಸಂಕೀರ್ಣ ಪ್ರಕರಣದ ನಿರ್ವಹಣೆಯ ಕುರಿತು ವಿಚಾರಣೆಯನ್ನು ಮೇ 26ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಈ ಹಿಂದೆ ನ್ಯಾಯಾಲಯವು ತಿಳಿಸಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು