ಮಂಗಳವಾರ, ಮೇ 24, 2022
28 °C

ಶ್ರೀನಗರದಲ್ಲಿ ಮೈನಸ್ 1.5 ಡಿಗ್ರಿ ಕನಿಷ್ಠ ತಾಪಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಕಾಶ್ಮೀರದಾದ್ಯಂತ ಶನಿವಾರ ತೀವ್ರತರ ಚಳಿ ಆರಂಭವಾಗಿದ್ದು, ಹಲವು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಕನಿಷ್ಠ ತಾಪಮಾನ ದಾಖಲಾಗಿದೆ.

ರಾಜಧಾನಿ ಶ್ರೀನಗರದಲ್ಲಿ ಮೈನಸ್ 1.5 ಡಿಗ್ರಿ ಸೆಲ್ಸಿಯಸ್‌, ಪಹಲ್ಗಾಮ್‌ನಲ್ಲಿ ಮೈನಸ್ 4.3 ಡಿಗ್ರಿ ಸೆಲ್ಸಿಯಸ್‌, ಕುಪ್ವಾರದಲ್ಲಿ ಮೈನಸ್ 2.7, ಗುಲ್ ಮಾರ್ಗ್‌ನಲ್ಲಿ ಮೈನಸ್ 1, ಕ್ವಾಜಿಗುಂಡದಲ್ಲಿ ಮೈನಸ್ 1.8, ಕೋಕನಾರ್ಗ್‌ನಲ್ಲಿ ಮೈನಸ್ 1.3 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

ಶನಿವಾರ ಮುಂಜಾನೆ ಕಾಶ್ಮೀರದ ಬಹುತೇಕ ಭಾಗಗಳಲ್ಲಿ ದಟ್ಟನೆಯ ಮಂಜು ಕವಿದ ವಾತಾವರಣದಿಂದ ಕೂಡಿದ್ದು, ಇದರಿಂದ ವಾಹನ ಸವಾರರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನವೆಂಬರ್‌ 23ರವರೆಗೆ ಇದೇ ವಾತಾವರಣ ಮುಂದುವರೆಯಲಿದ್ದು, ನ.24ರ ನಂತರ ಉತ್ತರ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹಿಮ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು