ಶುಕ್ರವಾರ, ಏಪ್ರಿಲ್ 23, 2021
30 °C

ಬಿಜೆಪಿ ಸೋಲಿಸಲು ಪ್ರೀತಿಯೇ ಅಸ್ತ್ರ: ರಾಹುಲ್‌ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುನಲ್ವೇಲಿ (ತಮಿಳುನಾಡು): ತಮ್ಮ ಪ್ರತಿಸ್ಪರ್ಧಿಗಳನ್ನು ‘ತುಳಿದು ಹಾಕಿರುವ’ ಪ್ರಧಾನಿ ನರೇಂದ್ರ ಮೋದಿ ಅವರು ‘ಅಸಾಧ್ಯ ಶತ್ರು’. ಪ್ರೀತಿ ಮತ್ತು ಅಹಿಂಸೆಯ ದಾರಿಯ ಮೂಲಕವೇ ಅವರನ್ನು ರಾಜಕೀಯ ವಿಸ್ಮೃತಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ತಮಿಳುನಾಡಿನ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ತಮ್ಮ ಉತ್ತಮ ಚಿಂತನೆಗಳನ್ನು ಜಾರಿಗೆ ತರಲು ಅಧಿಕಾರಕ್ಕೆ ಬರುವವರೆಗೆ ಕಾಯುವುದಕ್ಕಿಂತ ಈಗಿನ ಕೇಂದ್ರ ಸರ್ಕಾರವೇ ಅವುಗಳನ್ನು ಜಾರಿಗೆ ತರುವಂತೆ ಒತ್ತಡ ಹೇರುವುದು ಉತ್ತಮವಲ್ಲವೇ ಎಂಬ ಪ್ರಶ್ನೆಗೆ ರಾಹುಲ್‌ ಉತ್ತರಿಸಿದರು. 

‘ನಾವು ಅಸಾಧ್ಯ ಶತ್ರುವಿನ ವಿರುದ್ಧ ಹೋರಾಡುತ್ತಿದ್ದೇವೆ ಎಂಬುದು ನಿಜ. ಹಣದಲ್ಲಿ ಬಹಳ ಪ್ರಭಾವಿಯಾಗಿರುವ ಶತ್ರುವಿನ ವಿರುದ್ಧದ ಹೋರಾಟ ನಮ್ಮದು. ಪ್ರತಿಸ್ಪರ್ಧಿಗಳನ್ನು ತುಳಿದು ಹಾಕುವ ಶತ್ರುವಿನ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ, ಇದನ್ನು ನಾವು ಹಿಂದೆಯೂ ಮಾಡಿದ್ದೇವೆ. ಈಗ ಇರುವ ಹೊಸ ಶತ್ರುವಿಗಿಂತ ಬಹಳ ದೊಡ್ಡದಾಗಿದ್ದ ಶತ್ರು ಬ್ರಿಟಿಷರನ್ನು ನಾವು ಸೋಲಿಸಿದ್ದೇವೆ’ ಎಂದು ವಿವರಿಸಿದರು. 

‘ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಹೋಲಿಸಿದರೆ ಮೋದಿ ಅವರು ಏನೂ ಅಲ್ಲ. ಈ ದೇಶದ ಜನರು ಬ್ರಿಟಿಷ್‌ ಸಾಮ್ರಾಜ್ಯವನ್ನು ಹಿಂದಕ್ಕೆ ಅಟ್ಟಿದ್ದಾರೆ. ಅದೇ ರೀತಿ ನಾವು ಮೋದಿ ಅವರನ್ನು ನಾಗ್ಪುರಕ್ಕೆ (ಆರ್‌ಎಸ್‌ಎಸ್‌ ಕೇಂದ್ರ ಕಚೇರಿ) ಕಳುಹಿಸುತ್ತೇವೆ’ ಎಂದರು. ಆದರೆ, ಮೋದಿ ಅಥವಾ ಅವರ ಪಕ್ಷದ ಬಗ್ಗೆ ದ್ವೇಷ, ಸಿಟ್ಟು ಅಥವಾ ಹಿಂಸೆ ಇಲ್ಲದೆಯೇ ಇದನ್ನು ಸಾಧಿಸಲಾಗುವುದು ಎಂದು ಅವರು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು