ಮಂಗಳವಾರ, ಜೂನ್ 22, 2021
22 °C

ಸಿಸಿಐ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಾಟ್ಸ್‌ಆ್ಯಪ್‌ನ ಖಾಸಗಿತನದ ಹೊಸ ನೀತಿ ಕುರಿತು ತನಿಖೆ ನಡೆಸುವಂತೆ ಭಾರತದ ಸ್ಪರ್ಧಾ ನಿಯಂತ್ರಕ ಸಂಸ್ಥೆ ಕಾಂಪಿಟೇಷನ್‌ ಕಮಿಷನ್‌ ಆಫ್ ಇಂಡಿಯಾ (ಸಿಸಿಐ) ನೀಡಿದ್ದ ಆದೇಶವನ್ನು ಪ್ರಶ್ನಿಸಿ ಫೇಸ್‌ಬುಕ್ ಮತ್ತು ವಾಟ್ಸ್ಆ್ಯಪ್‌ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

'ಹೊಸ ಖಾಸಗಿತನದ ನೀತಿಯ ವಿರುದ್ಧ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಗಳ ಫಲಿತಾಂಶಕ್ಕಾಗಿ ಕಾಯುವುದು ಸಿಸಿಐಗೆ ಒಳ್ಳೆಯದು' ಎಂದು ನ್ಯಾಯಮೂರ್ತಿ ನವೀನ್ ಚಾವ್ಲಾ ಹೇಳಿದ್ದಾರೆ. 

ವಾಟ್ಸ್‌ಆ್ಯಪ್‌ನಿಂದ ಜನರ ವೈಯಕ್ತಿಕ ಖಾಸಗಿತನದ ಉಲ್ಲಂಘನೆ ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಚಾರಿಸಲಿದೆ. ಆದರೆ ವಾಟ್ಸ್‌ಆ್ಯಪ್‌ನ ಖಾಸಗಿತನ ನೀತಿಯಿಂದಾಗಿ ಅತಿಯಾದ ಪ್ರಮಾಣದಲ್ಲಿ ದತ್ತಾಂಶ ಸಂಗ್ರಹ ನಡೆದು ಜಾಹೀರಾತುದಾರರು ನಿರ್ದಿಷ್ಟ ಗ್ರಾಹಕರನ್ನು ಗುರಿಯಾಗಿಸುವ ಸಾಧ್ಯತೆ ಇದೆ. ಬಾಹುಳ್ಯ ಸ್ಥಾಪನೆ ಮಾಡುವ ಈ ವಿಚಾರ ತನ್ನ ವ್ಯಾಪ್ತಿಗೆ ಬರುತ್ತದೆ ಎಂದು ಸಿಸಿಐ ಹೇಳಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು