ನವದೆಹಲಿ: ದೇಶದಲ್ಲಿ ಕಳೆದ 120 ವರ್ಷಗಳಲ್ಲಿಯೇ ಫೆಬ್ರುವರಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಫೆಬ್ರುವರಿ ತಿಂಗಳಲ್ಲಿ ಸರಾಸರಿ ಕನಿಷ್ಠ ತಾಪಮಾನ 16.31 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ವರ್ಷ ದೇಶದಲ್ಲಿ ದಾಖಲಾದ ಸರಾಸರಿ ತಾಪಮಾನ 29.54 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು 1901ರ ನಂತರ ದಾಖಲಾದ ಗರಿಷ್ಠ ತಾಪಮಾನವಾಗಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಮಾರ್ಚ್‌ನಲ್ಲಿ, ದೇಶದ ಬಹುತೇಕ ಭಾಗಗಳಲ್ಲಿ ತಿಂಗಳ ಗರಿಷ್ಠ ತಾಪಮಾನವು ಸರಾಸರಿಗಿಂತಲೂ ಅಧಿಕವಿರುವ ಸಾಧ್ಯತೆ ಇದೆ. ತಿಂಗಳ ಕನಿಷ್ಠ ತಾಪಮಾನ ಕೂಡ ವಾಡಿಕೆ ಉಷ್ಣಾಂಶಕ್ಕಿಂತ ಹೆಚ್ಚೇ ಇರಲಿದೆ’ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಎಸ್.ಸಿ.ಭಾನ್ ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಕಂಡುಬರಬಹುದಾದ ತಾಪಮಾನದಲ್ಲಿನ ಹೆಚ್ಚಳವು ಗೋಧಿ ಕೊಯಿಲಿನ ಮೇಲೆ ಪರಿಣಾಮ ಬೀರಲಿದೆ ಎಂದು ಕೃಷಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಅಧಿಕ ತಾಪಮಾನದಿಂದಾಗಿ ಗೋಧಿ ಪೈರಿನ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೈತರಿಗೆ ಸಲಹೆ–ಸೂಚನೆಗಳನ್ನು ನೀಡಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.

ಸೂಚನೆ: ದೇಶದ ಹಲವೆಡೆ ತಾಪಮಾನದಲ್ಲಿ ಅಸಾಧಾರಣ ಹೆಚ್ಚಳ ಕಂಡುಬರುತ್ತಿದೆ. ಬಿಸಿಲ ಝಳದಿಂದಾಗಿ ಕಾಣಿಸಿಕೊಳ್ಳುವ ಕಾಯಿಲೆಗಳ ಮೇಲೆ ಕಣ್ಗಾವಲು ಇರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚಿಸಿದ್ದಾರೆ.

ಬಿಸಿಲ ಝಳದಿಂದಾಗಿ ಕಂಡುಬರುವ ಕಾಯಿಲೆಗಳು ಹಾಗೂ ಸಂಭವಿಸುವ ಸಾವುಗಳ ಕುರಿತ ಮಾಹಿತಿಯನ್ನು ಸಂಬಂಧಪಟ್ಟ ಪೋರ್ಟಲ್‌ನಲ್ಲಿ ಅಳವಡಿಸುವಂತೆ ಅವರು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಕೂಲಿಂಗ್ ಸಾಧನಗಳನ್ನು ಅಳವಡಿಸಬೇಕು. ಒಆರ್‌ಎಸ್, ಐಸ್‌ಪ್ಯಾಕ್‌ಗಳು ಹಾಗೂ ಅಗತ್ಯ ಔಷಧಿಗಳ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು’ ಎಂದೂ ಅವರು ಸೂಚಿಸಿದ್ದಾರೆ.

ಬಾಕ್ಸ್,,,,,,,,

ಬಿಸಿಗಾಳಿ: ಆರೋಗ್ಯ ಸಚಿವಾಲಯದ ಸಲಹೆಗಳು

ನವದೆಹಲಿ: ದೇಶದಲ್ಲಿ ಬರುವ ದಿನಗಳಲ್ಲಿ ಬಿಸಿ ಗಾಳಿ ಬೀಸುವುದು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸಚಿವಾಲಯವು ಸಲಹೆ ನೀಡಿದೆ.

ಈ ವರ್ಷ, ತಾಪಮಾನದಲ್ಲಿ ಕಂಡುಬರಬಹುದಾದ ಹೆಚ್ಚಳಕ್ಕೆ ಸಂಬಂಧಿಸಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ ಬೆನ್ನಲ್ಲೇ ಸಚಿವಾಲಯವು ಸಲಹೆಗಳ ಪಟ್ಟಿಯನ್ನು ಪ್ರಕಟಿಸಿದೆ.

ನಿತ್ಯದ ಹವಾಮಾನ ಕುರಿತ ಮಾಹಿತಿ ಹಾಗೂ ಸಲಹೆ–ಸೂಚನೆಗಳಿಗಾಗಿ ರೇಡಿಯೊ ಕೇಳಬೇಕು, ಟಿವಿ ವೀಕ್ಷಿಸಬೇಕು ಅಥವಾ ದಿನಪತ್ರಿಕೆಗಳನ್ನು ಗಮನಿಸಬೇಕು. ಇಲಾಖೆಯ ವೆಬ್‌ಸೈಟ್‌ಗೂ ಭೇಟಿ ನೀಡುವಂತೆ ತಿಳಿಸಿದೆ.

ಏನು ಮಾಡಬಾರದು?

* ಬಿಸಿಲ ಝಳ ಹೆಚ್ಚಾಗಿರುವ ದಿನದ ಅವಧಿಯಲ್ಲಿ ಅಧಿಕ ಪ್ರೊಟೀನ್‌ಯುಕ್ತ ಆಹಾರ ಸೇವನೆ

* ಮಧ್ಯಾಹ್ನ 12ರಿಂದ 3ರ ವರೆಗೆ ಮನೆಯಿಂದ ಹೊರಗೆ ಹೋಗುವುದು

* ಬರಿಗಾಲಿನಲ್ಲಿ ಹೊರಗೆ ಹೋಗಬಾರದು

ಏನು ಮಾಡಬೇಕು?

* ಬಾಯಾರಿಕೆ ಎನಿಸಿದ್ದರೂ ಹೆಚ್ಚು ಕುಡಿಯಬೇಕು

* ಒಆರ್‌ಎಸ್ ಬಳಕೆ

* ಹಣ್ಣಿನ ಜ್ಯೂಸ್ (ಸ್ವಲ್ಪ ಉಪ್ಪು ಬೆರೆಸಬೇಕು), ಮಜ್ಜಿಗೆ/ಲಸ್ಸಿ ಕುಡಿಯಬೇಕು

* ಸಾಕಷ್ಟು ಗಾಳಿಯಾಡುವ ಹಾಗೂ ತಂಪಾದ ಒಳಾಂಗಣಗಳಲ್ಲಿ ಇರಬೇಕು

* ತೆಳುವಾದ ಅರಳೆಯ ವಸ್ತ್ರಗಳನ್ನು ಧರಿಸಬೇಕು

* ಹೊರಗಡೆ ಹೋಗುವ ಸಂದರ್ಭಗಳಲ್ಲಿ ಕೊಡೆ, ಟೊಪ್ಪಿಗೆ, ಟವಲ್ ಅಥವಾ ತಲೆಗೆ ಹೊದ್ದುಕೊಳ್ಳುವ ಸಾಂಪ್ರದಾಯಿಕ ವಸ್ತ್ರಗಳನ್ನು ಬಳಸಿ

108/102ಕ್ಕೆ ಕರೆ ಮಾಡಿ

ಬಿಸಿಗಾಳಿಯಿಂದಾಗಿ ಆರೋಗ್ಯದಲ್ಲಿ ಕಂಡುಬರುವ ಏರುಪೇರುಗಳತ್ತ ಗಮನ ಕೊಡಬೇಕು. ತಲೆಸುತ್ತು, ವಾಂತಿ, ತಲೆನೋವು, ವಿಪರೀತ ಬಾಯಾರಿಕೆ, ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ, ತೀವ್ರ ಉಸಿರಾಟ ಹಾಗೂ ಹೃದಯ ಬಡಿತದಲ್ಲಿ ಹೆಚ್ಚಳ ಕಂಡು ಬಂದರೆ ಕೂಡಲೇ ವೈದ್ಯಕೀಯ ಸಲಹೆ ಪಡೆಯಬೇಕು.

ತುರ್ತು ಸಂದರ್ಭಗಳಲ್ಲಿ ಶುಲ್ಕರಹಿತ ದೂರವಾಣಿ ಸಂಖ್ಯೆ 108 ಅಥವಾ 102 ಸಂಪರ್ಕಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.