ಬುರೇವಿ ಚಂಡಮಾರುತ: ತಮಿಳುನಾಡು, ಪುದುಚೇರಿಯಲ್ಲಿ ಭಾರಿ ಮಳೆ

ಚೆನ್ನೈ:ತಮಿಳುನಾಡಿನ ಕರಾವಳಿ ಪ್ರದೇಶವಾದ ಪಂಬನ್ ಮತ್ತು ಕನ್ಯಾಕುಮಾರಿಯನ್ನು ಹಾದು ಹೋಗಲು ಬುರೇವಿ ಚಂಡಮಾರುತ ಸಜ್ಜಾಗಿದ್ದು ತಮಿಳುನಾಡು ಮತ್ತು ಪುದುಚೇರಿಯ ಹಲವು ಭಾಗಗಳಲ್ಲಿ ಕಳೆದ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಶ್ರೀಲಂಕಾದಿಂದ ಚಂಡಮಾರುತವು ಗುರುವಾರ ಮಧ್ಯಾಹ್ನದ ಹೊತ್ತಿಗೆ ಪಂಬನ್ ಕರಾವಳಿ ಪ್ರದೇಶದ ಹತ್ತಿರ ತಲುಪಲಿದೆ ಎಂದು ಇಲಾಖೆ ತಿಳಿಸಿದೆ.
‘ಗುರುವಾರ ಮಧ್ಯಾಹ್ನದ ವೇಳೆಗೆ ಪಂಬನ್ ಪ್ರದೇಶದ ಪಶ್ಚಿಮ ದಿಕ್ಕಿನ ವಾರ್ಡ್ಗಳತ್ತ ಚಂಡಮಾರುತ ಚಲಿಸುವ ಸಾಧ್ಯತೆ. ಅಲ್ಲದೆ ಪಂಬನ್ ಮತ್ತು ಕನ್ಯಾಕುಮಾರಿ ಮೂಲಕ ದಕ್ಷಿಣ ತಮಿಳುನಾಡು ಕರಾವಳಿಯನ್ನು ದಾಟಲಿದೆ’ ಎಂದು ಐಎಂಡಿ ಟ್ವಿಟರ್ನಲ್ಲಿ ತಿಳಿಸಿದೆ.
ಈ ಚಂಡಮಾರುತದಿಂದಾಗಿ ತಿರುವರೂರು ಜಿಲ್ಲೆಯ ಕುಡವಾಸಲ್, ನಾಗಪಟ್ಟಣಂ, ವೇದರಣ್ಯಂ, ಕರೈಕಲ್, ತಿರುನಾತುರೈಪೂಂಡಿ ಮತ್ತು ರಾಮನಾಥಪುರಂನ ಮುಡುಕುಲತೂರ್ನಲ್ಲಿ ಕಳೆದ ರಾತ್ರಿಯಿಂದ ಇಂದು ಮುಂಜಾನೆ ತನಕ 9 ರಿಂದ 20 ಸೆಂ.ಮೀ ಮಳೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.