ಪಾಕ್ ಗೂಢಾಚಾರಿ ಮಹಿಳೆಯಿಂದ ಹನಿ ಟ್ರ್ಯಾಪ್: ರಕ್ಷಣಾ ಮಾಹಿತಿ ನೀಡಿದ ಯೋಧನ ಸೆರೆ

ಜೈಪುರ(ಪಿಟಿಐ): ಪಾಕಿಸ್ತಾನದ ಗೂಢಚಾರಿ ಮಹಿಳೆಯ ಹನಿಟ್ರ್ಯಾಪ್ಗೆ ಸಿಲುಕಿ ಸೇನೆಯ ರಹಸ್ಯ ಮತ್ತು ರಕ್ಷಣಾ ಮಾಹಿತಿ ಹಂಚಿಕೊಂಡ ಯೋಧನನ್ನು ಬಂಧಿಸಲಾಗಿದೆ ಎಂದು ಗುಪ್ತಚರ ವಿಭಾಗದ ಉನ್ನತ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
ಜೋಧ್ಪುರದಲ್ಲಿ ಕರ್ತವ್ಯದಲ್ಲಿದ್ದ ಉತ್ತರಾಖಂಡ ಮೂಲದ ಯೋಧ ಪ್ರದೀಪ್ ಕುಮಾರ್ ಬಂಧಿತ ಆರೋಪಿ. ಮೂರು ವರ್ಷಗಳ ಹಿಂದಷ್ಟೇ ಈತ ಸೇನೆ ಸೇರಿದ್ದು, ಪಾಕ್ ಗೂಢಚಾರಿ ಮಹಿಳೆಯ ಹನಿಟ್ರ್ಯಾಪ್ಗೆ ಸಿಲುಕಿದ್ದ. ಆತನ ಚಲನವಲನದ ಮೇಲೆ ಹಲವು ದಿನಗಳಿಂದ ಕಣ್ಗಾವಲಿರಿಸಿ, ಮೇ 18ರಂದು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಆರು ತಿಂಗಳ ಹಿಂದೆ ಕುಮಾರ್ ಮೊಬೈಲ್ಗೆ ಕರೆ ಮಾಡಿದ ಗೂಢಚಾರಿ ಮಹಿಳೆ, ಬೆಂಗಳೂರಿನಲ್ಲಿ ಸೇನೆಯಲ್ಲಿ ನರ್ಸ್ ಆಗಿರುವುದಾಗಿ ಪರಿಚಯಿಸಿಕೊಂಡಿದ್ದಾಳೆ. ಮದುವೆಯ ಪ್ರಸ್ತಾಪವಿಟ್ಟು ದೆಹಲಿಯಲ್ಲಿ ಭೇಟಿಯಾಗುವಂತೆ ನಂಬಿಸಿ, ಹನಿಟ್ರ್ಯಾಪ್ಗೆ ಬೀಳಿಸಿಕೊಂಡಿದ್ದಾಳೆ. ನಂತರ ಫೇಸ್ಬುಕ್ ಮತ್ತು ವಾಟ್ಸ್ ಆ್ಯಪ್ ಮೂಲಕ ಸೇನೆಯ ಗೋಪ್ಯ ಮಾಹಿತಿಯನ್ನು ಕುಮಾರ್ನಿಂದ ಆಕೆ ಪಡೆದುಕೊಂಡಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.