ಶುಕ್ರವಾರ, ಮೇ 7, 2021
23 °C

ಭವಿಷ್ಯದಲ್ಲಿ ಕಾಶ್ಮೀರಿ ಪಂಡಿತರ ಸ್ಥಳಾಂತರ ನಡೆಯದಿರಲಿ: ಹೊಸಬಾಳೆ ವಿಶ್ವಾಸ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭವಿಷ್ಯದಲ್ಲಿ ಕಣಿವೆ ರಾಜ್ಯದಿಂದ ಕಾಶ್ಮೀರಿ ಪಂಡಿತರ ಸ್ಥಳಾಂತರ ಇರುವುದಿಲ್ಲ ಎಂಬ ವಿಶ್ವಾಸ ಹೊಂದಿರುವುದಾಗಿ ಆರ್‌ಎಸ್ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಬುಧವಾರ ಹೇಳಿದರು.

ಅಲ್ಲದೇ, ಈಗಾಗಲೇ ಕಾಶ್ಮೀರವನ್ನು ತೊರೆದಿರುವ ಪಂಡಿತರ ಪುನರ್ವಸತಿ ಕಾರ್ಯವೂ ತ್ವರಿತವಾಗಿ ನಡೆಯಲಿದೆ ಎಂಬ ವಿಶ್ವಾಸವೂ ಇದೆ ಎಂದರು.

ಜಮ್ಮು ಮೂಲದ ಸಂಜೀವಿನಿ ಶಾರದಾ ಕೇಂದ್ರವು ‘ಕಾಶ್ಮೀರಿ ಪಂಡಿತರು ಮರಳಿ ಕಣಿವೆ ರಾಜ್ಯಕ್ಕೆ’ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಸಂವಾದದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಶ್ಮೀರಿ ಪಂಡಿತರು ತಮ್ಮ ಹೊಸ ವರ್ಷವಾದ ನವರೇಹ್‌ವನ್ನು ಮುಂದಿನ ವರ್ಷ ಕಾಶ್ಮೀರದಲ್ಲಿಯೇ ಆಚರಿಸುವಂತಾಗಲಿ ಎಂದು ಆಶಿಸುವೆ’ ಎಂದು ಹೊಸಬಾಳೆ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು