ಮಂಗಳವಾರ, ಅಕ್ಟೋಬರ್ 26, 2021
20 °C

ಗುಜರಾತ್‌ ವಿಧಾನಸಭೆ ಚುನಾವಣೆಗೆ 100 ಹೊಸ ಅಭ್ಯರ್ಥಿಗಳು: ಸಿ.ಆರ್.ಪಾಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧೀನಗರ: 2022ರಲ್ಲಿ ನಡೆಯಲಿರುವ  ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ನೂರು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್ ಹೇಳಿದ್ದಾರೆ. 

ಮಂಗಳವಾರ ಹಿಮ್ಮತ್ ನಗರದಲ್ಲಿ ನಡೆದ ‘ಪೇಜ್‌ ಪ್ರಮುಖ್‌’ ಕಾರ್ಡ್‌ ವಿತರಣಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಮುಖ್ಯಸ್ಥರು, ’ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಳೆ ಅಭ್ಯರ್ಥಿಗಳನ್ನು ಬದಲಿಸಿ ಕನಿಷ್ಠ ನೂರು ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತದೆ. ಇಲ್ಲಿ ಹಾಜರಿರುವ ಹಾಲಿ ಶಾಸಕರು ಈ ಮಾತನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ,‘ ಎಂದು ಅವರು ಹೇಳಿದರು. 

‘ಚುನಾವಣೆಗೆ ಟಿಕೆಟ್‌ ಬೇಕು ಎಂದು ಯಾರು ನನ್ನ ಬಳಿಗೆ ಬರಬೇಡಿ. ನಿರ್ಧಾರ ಕೈಗೊಳ್ಳುವವರು ಹೈಕಮಾಂಡ್‌ ನಾಯಕರು. ಯಾರಿಗಾದರೂ ಅಸಮಾಧಾನವಿದ್ದರೆ ಅವರೆಲ್ಲರೂ ನೇರವಾಗಿ ದೆಹಲಿಗೆ ಹೋಗಬಹುದು,’ ಎಂದು ತಿಳಿಸಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು