ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿಗೆ ಆರ್ಥಿಕ ನೆರವು ನೀಡುವುದು ಪತಿಯ ಕರ್ತವ್ಯ : ಹೈಕೋರ್ಟ್

Last Updated 6 ಏಪ್ರಿಲ್ 2021, 19:25 IST
ಅಕ್ಷರ ಗಾತ್ರ

ನವದೆಹಲಿ: ‘ಕಾನೂನು ಸಮ್ಮತಿಯುಳ್ಳ ನಿರ್ದಿಷ್ಟ ಪ್ರಕರಣ ಹೊರತುಪಡಿಸಿ ಪತ್ನಿಯನ್ನು ನೋಡಿಕೊಳ್ಳುವುದು ಮತ್ತು ಆಕೆಗೆ ಆರ್ಥಿಕವಾಗಿ ಬೆಂಬಲ ನೀಡುವುದು ಪತಿಯ ಕರ್ತವ್ಯ’ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಪ್ರತ್ಯೇಕವಾಗಿರುವ ಪತ್ನಿಗೆ ಮಾಸಿಕ ₹ 17000 ನೀಡಬೇಕು ಎಂದು ಕೆಳಹಂತದ ಕೋರ್ಟ್‌ ನೀಡಿದ್ದ ಆದೇಶವನ್ನು ಈ ಮೂಲಕ ನ್ಯಾಯಮೂರ್ತಿ ಸುಬ್ರಹ್ಮಣಿಯಂ ಪ್ರಸಾದ್ ಅವರು ಎತ್ತಿಹಿಡಿದರು.

ಕೆಳಹಂತದ ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ವ್ಯಕ್ತಿ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಆಗಿದ್ದು, ಚೆನ್ನಾಗಿ ಸಂಪಾದನೆ ಮಾಡುತ್ತಿದ್ದಾರೆ. ನಿಶ್ಚಿತ ಆದಾಯವಿಲ್ಲದ ಪತ್ನಿಗೆ ಮಾಸಿಕ ₹ 17 ಸಾವಿರ ನೀಡಲು ಶಕ್ತರಾಗಿದ್ದಾರೆ ಎಂದು ತಿಳಿಸಿತು.

ಮಹಿಳೆಯು ಸ್ವಂತ ಬಲದಿಂದ ಬದುಕಬಲ್ಲರು ಎಂಬುದಕ್ಕೆ ಯಾವುದೇ ದಾಖಲೆ ಒದಗಿಸಿಲ್ಲ. ನಿಯತಕಾಲಿಕವೊಂದರ ಮುಖಪುಟವು ಈ ವಾದವನ್ನು ಪುರಸ್ಕರಿಸುವುದಿಲ್ಲ ಎಂದು ಕೋರ್ಟ್‌ ಹೇಳಿತು.

ಕೆಳಹಂತದ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಯಲ್ಲಿ ಮಹಿಳೆಯರು ತಾನು ರೂಪದರ್ಶಿಯಾಗಿದ್ದು, ಕಡಿಮೆ ಪ್ರಮಾಣದ ಆದಾಯವಿದೆ ಎಂದು ತಿಳಿಸಿದ್ದಾರೆ. ಇದರರ್ಥ ಆಕೆ ಬದುಕಲು ಅಗತ್ಯವಿರುವಷ್ಟು ಸಂಪಾದನೆ ಮಾಡುತ್ತಿದ್ದಾರೆ ಎಂದರ್ಥವಲ್ಲ ಎಂದು ತಿಳಿಸಿತು.

ದಂಪತಿ 1985ರ ಜೂನ್‌ನಲ್ಲಿ ಮದುವೆಯಾಗಿದ್ದು, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದರು. ಪುತ್ರಿ 2010ರಲ್ಲಿ ಮೃತಪಟ್ಟಿದ್ದು ಇಬ್ಬರು ಮಕ್ಕಳು ವಯಸ್ಕರಾಗಿದ್ದು, ಕೆಲಸದಲ್ಲಿದ್ದಾರೆ. ದಂಪತಿ 2012ರಲ್ಲಿ ಪ್ರತ್ಯೇಕಗೊಂಡಿದ್ದಾರೆ. ಪತಿಗೆ ಮಾಸಿಕ ₹ 50 ಸಾವಿರ ಆದಾಯವಿದ್ದು, ಕೃಷಿಯಿಂದಲೂ ಆದಾಯ ಬರುತ್ತಿದೆ ಎಂದು ಪತ್ನಿ ಪ್ರತಿಪಾದಿಸಿದ್ದರು.

ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ್ದ ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದು, ಉತ್ತಮ ಶಿಕ್ಷಣ ಕೊಡಿಸಿದ್ದೇನೆ. ಪತ್ನಿ ಕೂಡಾ ಗೌರವಾನ್ವಿತ ಮೊತ್ತವನ್ನು ಸಂಪಾದಿಸುತ್ತಿದ್ದಾರೆ ಎಂದು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT