ಬುಧವಾರ, ಮಾರ್ಚ್ 22, 2023
33 °C

ಗೌರವ ಮತ್ತು ಸಮಾನತೆ ತತ್ವದಲ್ಲಿ ನಂಬಿಕೆ: ರಾಜನಾಥ್ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ವಿದೇಶಗಳೊಂದಿಗೆ ಗೌರವ ಮತ್ತು ಸಮಾನತೆ ತತ್ವದಲ್ಲಿ ನಂಬಿಕೆಯನ್ನು ಹೊಂದಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ. 

‘ಏರೋ ಇಂಡಿಯಾ 2023’ ಕಾರ್ಯಕ್ರಮದ ರಾಯಭಾರಿಗಳ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಪ್ರದರ್ಶನ ಎಂದೇ ಖ್ಯಾತಿಯಾಗಿರುವ ‘ಏರೋ ಇಂಡಿಯಾ’ದ 14ನೇ ಆವೃತ್ತಿಯ ಫೆಬ್ರುವರಿ ತಿಂಗಳ 13ರಿಂದ 17ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮೇಕ್ ಇನ್ ಇಂಡಿಯಾ ಭಾರತಕ್ಕೆ ಮಾತ್ರ ಎನ್ನುವ ವಿಷಯವಲ್ಲ ಬದಲಿಗೆ ಇದು ‘ಮೇಕ್ ಫಾರ್ ದಿ ವರ್ಲ್ಡ್‌’ ಉದ್ದೇಶವನ್ನು ಹೊಂದಿದೆ ಎಂದರು. 

ನಮ್ಮ ಸ್ವಾವಲಂಬನೆಯಾದ ಮೇಕ್‌ ಇನ್‌ ಇಂಡಿಯಾ ಉಪಕ್ರಮವು ನಮ್ಮ ಪಾಲುದಾರ ದೇಶಗಳೊಂದಿಗೆ ‘ಹೊಸ ಮಾದರಿಯಾಗಿದೆ. ನಮ್ಮ ಪಾಲುದಾರ ದೇಶಗಳೊಂದಿಗೆ ರಕ್ಷಣಾ ಸಾಧನಗಳನ್ನು ಖರೀದಿಸುವ ಹಾಗೂ ತಾಂತ್ರಿಕ ಜ್ಞಾನವನ್ನೂ ಹಂಚಿಕೊಳ್ಳುವುದು ಆಗಿದೆ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು