ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ–ತರೂರ್‌ ಅವರಲ್ಲಿ ಯಾರು ಗೆದ್ದರೂ ರಿಮೋಟ್ ಕಂಟ್ರೋಲ್ ಆಗಲಾರರು: ರಾಹುಲ್‌

Last Updated 8 ಅಕ್ಟೋಬರ್ 2022, 11:10 IST
ಅಕ್ಷರ ಗಾತ್ರ

ತುಮಕೂರು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅಥವಾ ಶಶಿ ತರೂರ್‌ ಅವರಲ್ಲಿ ಯಾರು ಗೆದ್ದರೂ, ಅವರು ರಿಮೋಟ್‌ ಕಂಟ್ರೋಲ್‌ ಆಗಿರಲಾರರು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

ಭಾರತ ಜೋಡಿಸಿ ಯಾತ್ರೆ ತುಮಕೂರು ತಲುಪಿದೆ. ಯಾತ್ರೆಯ ನಡುವೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅಥವಾ ಶಶಿ ತರೂರ್ ಇಬ್ಬರೂ ಸ್ಥಾನ ಮತ್ತು ದೃಷ್ಟಿಕೋನಗಳನ್ನು ಉಳ್ಳವರು. ಕಾನೂನು ಮತ್ತು ತಿಳುವಳಿಕೆಯುಳ್ಳವರು. ಇವರಿಬ್ಬರಲ್ಲಿ ಯಾರು ಕೂಡ ರಿಮೋಟ್ ಕಂಟ್ರೋಲ್ ಆಗುತ್ತಾರೆ ಎಂದು ನಾನು ಭಾವಿಸಲಾರೆ’ ಎಂದು ಅವರು ಹೇಳಿದರು.

‘ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರೇ ಆಯ್ಕೆಯಾದರೂ, ಅವರು ಗಾಂಧಿ ಕುಟುಂಬದ ರಿಮೋಟ್‌ ಕಂಟ್ರೊಲ್ ಆಗಲಿದ್ದಾರೆ’ ಎಂಬ ಟೀಕೆಗಳು ಈಗಾಗಲೇ ಕೇಳಿ ಬಂದಿವೆ. ಈ ಮಧ್ಯೆ ರಾಹುಲ್‌ ಗಾಂಧಿ ಅವರು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT