ಶನಿವಾರ, ಜುಲೈ 2, 2022
25 °C

ಮಾಸಿಕ ₹5ಲಕ್ಷ ವೇತನ ಪಡೆದು,₹2.75 ಲಕ್ಷ ತೆರಿಗೆ ಕಟ್ಟುವೆ: ರಾಷ್ಟ್ರಪತಿ ಕೋವಿಂದ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಲಖನೌ: ದೇಶದ ನಾಗರೀಕರು ತಪ್ಪದೆ ತೆರಿಗೆ ಕಟ್ಟಬೇಕು, ಇದರಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ತಿಳಿಸಿದರು.

ತವರು ರಾಜ್ಯ ಉತ್ತರಪ್ರದೇಶಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ರಾಷ್ಟ್ರಪತಿಗಳು ಇಲ್ಲಿನ ಜಿನ್‌ಜಾಕ್‌ ರೈಲು ನಿಲ್ದಾಣದ ಸಮೀಪ ಸ್ಥಳೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಮನಥ್ ಕೋವಿಂದ್‌ ಅವರ ಹುಟ್ಟೂರು ಪರೌಂಖ್‌ ಗ್ರಾಮ ಜಿನ್‌ಜಾಕ್‌ ಪಟ್ಟಣದ ಸಮೀಪದಲ್ಲಿದೆ.

ದೇಶದಲ್ಲಿ ಅಭಿವೃದ್ದಿ ಕೆಲಸಗಳು ನಡೆಯಬೇಕಾದರೆ ನಾಗರೀಕರು ಜವಾಬ್ದಾರಿಯುತವಾಗಿ ತೆರಿಗೆಯನ್ನು ಪಾವತಿಸಬೇಕು. ನಾನು ಕೂಡ ತಪ್ಪದೇ ತೆರಿಗೆಯನ್ನು ಕಟ್ಟುತ್ತೇನೆ ಎಂದರು.

ದೇಶದ ಮೊದಲ ಪ್ರಜೆಯಾಗಿರುವ ನಾನು ಮಾಸಿಕ ₹ 5 ಲಕ್ಷ ವೇತನ ಪಡೆಯುತ್ತೇನೆ, ಅದರಲ್ಲಿ ₹ 2.75 ಲಕ್ಷ ಹಣವನ್ನು ತೆರಿಗೆಗೆ ಪಾವತಿಸುತ್ತೇನೆ ಎಂದು ಕೋವಿಂದ್‌ ಹೇಳಿದರು. ಇದರಲ್ಲಿ ನಾನು ಉಳಿಸುವುದಕ್ಕಿಂತ ಹೆಚ್ಚಿನ ಮೊತ್ತವನ್ನು ನಮ್ಮ ಅಧಿಕಾರಿಗಳು, ಇಲ್ಲಿ ಸೇರಿರುವ ಶಿಕ್ಷಕರೂ ಸಂಬಳವಾಗಿ ಪಡೆಯುತ್ತಾರೆ ಎಂದರು.

ನಾವು–ನೀವು ತೆರಿಗೆ ಪಾವತಿಸಿದರೆ ಮಾತ್ರ ದೇಶದಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲು ಸಾಧ್ಯ ಎಂದು ಹೇಳುವ ಸಲುವಾಗಿ ಇಲ್ಲಿ ವೇತನದ ವಿಷಯವನ್ನು ಪ್ರಸ್ತಾಪ ಮಾಡಿದೆ ಎಂದು ರಾಮನಾಥ್‌ ಕೋವಿಂದ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು