ಶುಕ್ರವಾರ, ಮೇ 20, 2022
26 °C

ಬಿಜೆಪಿ ಜೊತೆಗಿನ ಮೈತ್ರಿಯಿಂದ 25 ವರ್ಷ ವ್ಯರ್ಥ ಮಾಡಿದ ಶಿವಸೇನಾ: ಉದ್ಧವ್ ಠಾಕ್ರೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತೀಯ ಜನತಾ ಪಕ್ಷದೊಂದಿಗಿನ (ಬಿಜೆಪಿ) ಮೈತ್ರಿಯಿಂದ ಶಿವಸೇನಾ 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ನಾನು ಈಗಲೂ ನಂಬಿದ್ದೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಶಿವಸೇನೆಯು ಸ್ವತಂತ್ರವಾಗಿ ಚುನಾವಣೆ ಎದುರಿಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲನ್ನು ಸ್ವೀಕರಿಸಿದ್ದೇನೆ. ಮಹಾರಾಷ್ಟ್ರದ ಹೊರಗೂ ಪಕ್ಷವನ್ನು ವಿಸ್ತರಿಸಿ ದೇಶ ರಾಜಕಾರಣದಲ್ಲೂ ಪ್ರಮುಖ ಪಾತ್ರ ವಹಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 

'ಅಧಿಕಾರದ ಮೂಲಕ ಹಿಂದುತ್ವ ಅಜೆಂಡಾವನ್ನು ಮುಂದಕ್ಕೆ ಕೊಂಡೊಯ್ಯಲು ಬಿಜೆಪಿಯೊಂದಿಗೆ ಶಿವಸೇನಾ ಮೈತ್ರಿ ಮಾಡಿಕೊಂಡಿತ್ತು. ಶಿವಸೇನಾ ವೋಟಿಗಾಗಿ ಹಿಂದುತ್ವವನ್ನು ಎಂದೂ ಬಳಕೆ ಮಾಡಿಲ್ಲ. ಇನ್ನೊಂದೆಡೆ ಬಿಜೆಪಿ ರಾಜಕೀಯ ಲಾಭಕ್ಕಾಗಿ ಹಿಂದುತ್ವವನ್ನು ಬಳಸಿಕೊಂಡಿದೆ' ಎಂದು ಟೀಕಿಸಿದರು.

'ಬಿಜೆಪಿ ರಾಜಕೀಯವಾಗಿ ಬೆಳೆಯುತ್ತಿರುವಾಗ ಶಿವಸೇನಾ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಆಗ ಬಿಜೆಪಿ ಹಲವು ಕಡೆಗಳಲ್ಲಿ ಠೇವಣಿ ಕಳೆದುಕೊಂಡಿತ್ತು. ಹಿಂದುತ್ವಕ್ಕಾಗಿ ಅಧಿಕಾರ ಬೇಕು ಎಂಬ ಕಾರಣಕ್ಕೆ ಶಿವಸೇನಾ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಸೇನೆಯು ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡಿದೆ, ಹಿಂದುತ್ವವನ್ನಲ್ಲ! ಬಿಜೆಪಿಯ ಅವಕಾಶವಾದಿ ಹಿಂದುತ್ವ ಅಧಿಕಾರಕ್ಕಾಗಿ ಮಾತ್ರವಾಗಿದೆ' ಎಂದು ಆರೋಪಿಸಿದರು.

'ಅವಕಾಶವಾದಿ ರಾಜಕಾರಣದಿಂದಲೇ ಕಾಶ್ಮೀರದಲ್ಲಿ ಪಿಡಿಪಿ ಹಾಗೂ ಬಿಹಾರದಲ್ಲಿ ಸಂಘ ಮುಕ್ತಿಗಾಗಿ (ಆರ್‌ಎಸ್‌ಎಸ್) ಹೇಳಿಕೆ ನೀಡಿರುವ ನಿತೀಶ್ ಕುಮಾರ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. 2019ರಲ್ಲಿ ಸೇನೆಯು ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆ ಸೇರಿಕೊಂಡು 'ಮಹಾ ವಿಕಾಸ್ ಆಘಾಡಿ' ಮೈತ್ರಿಕೂಟವನ್ನು ರಚಿಸಿದೆ. ಇನ್ನೊಂದೆಡೆ ಬಿಜೆಪಿ ಪಕ್ಷಗಳಲ್ಲಿ ಒಡಕು ಸೃಷ್ಟಿಸಿ ಚುನಾಯಿತ ಸರ್ಕಾರಗಳನ್ನು ಅಧಿಕಾರದಿಂದ ಕೆಡವಿದೆ' ಎಂದು ವಾಗ್ದಾಳಿ ನಡೆಸಿದರು.

'ರಾಷ್ಟ್ರೀಯ ಹಿತಾಸಕ್ತಿಯನ್ನು ಬೆಂಬಲಿಸಲು ನಾವು ಪೂರ್ಣ ಹೃದಯದಿಂದ ಬಿಜೆಪಿಯನ್ನು ಬೆಂಬಲಿಸಿದೆವು. ಅವರು ರಾಷ್ಟ್ರಮಟ್ಟದಲ್ಲಿ ಮತ್ತು ನಾವು ಮಹಾರಾಷ್ಟ್ರದಲ್ಲಿ ಮುನ್ನಡೆಸಲಿದ್ದೇವೆ ಎಂಬ ಸ್ಪಷ್ಟ ತಿಳುವಳಿಕೆಯಿತ್ತು. ಆದರೆ ಅವರು ನಮಗೆ ದ್ರೋಹ ಬಗೆದರು ಮತ್ತು ನಮ್ಮನ್ನು ನಿರ್ನಾಮ ಮಾಡುವ ಪ್ರಯತ್ನ ಮಾಡಿದರು. ಈಗ ಅವರಿಗೆ ತಿರುಗೇಟು ನೀಡಿದ್ದೇವೆ. ಬಿಜೆಪಿ ಎಂದರೆ ಹಿಂದುತ್ವವಲ್ಲ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 25 ವರ್ಷಗಳನ್ನು ವ್ಯರ್ಥ ಮಾಡಿದ್ದೇವೆ ಎಂಬ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ' ಎಂದು ಪುನರುಚ್ಛರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು