ಪಟನಾ: ಉದ್ಯೋಗಕ್ಕಾಗಿ ಭೂಮಿ ಪಡೆದಿರುವ ಆರೋಪದಲ್ಲಿ ಜಾರಿ ನಿರ್ದೇಶನಾಲಯವು, ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಆರೋಪಿಸಿದ್ದಾರೆ. ಅಲ್ಲದೇ ಏನೇ ಕಿರುಕುಳ ನೀಡಿದರೂ ನಿಮ್ಮ ಮುಂದೆ ತಲೆ ಬಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನಾನು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೋಡಿದ್ದೇವೆ. ನಾವು ಅದರ ವಿರುದ್ಧ ಹೋರಾಟ ಮಾಡಿದ್ದೆವು ಕೂಡ. ಆಧಾರರಹಿತ ಸೇಡಿನ ಪ್ರಕರಣದಲ್ಲಿ ನನ್ನ ಪುತ್ರಿಯರು, ಸಣ್ಣ ಮೊಮ್ಮಕ್ಕಳು ಹಾಗೂ, ಗರ್ಭಿಣಿ ಸೊಸೆಯನ್ನು ವಿಚಾರಣೆ ನೆಪದಲ್ಲಿ ಬಿಜೆಪಿಯ ಇ.ಡಿ 15 ಗಂಟೆಗಳ ಕಾಲ ಕೂರಿಸಿದೆ. ನಮ್ಮೊಂದಿಗೆ ರಾಜಕೀಯ ಹೋರಾಟ ನಡೆಸಲು ಬಿಜೆಪಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತದೆಯೇ?‘ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ನಾನು ಅವರ ಎದುರು ಯಾವತ್ತೂ ತಲೆ ತಗ್ಗಿಸಿಲ್ಲ. ನನ್ನ ಕುಟುಂಬದ ಅಥವಾ ನನ್ನ ಪಕ್ಷದ ಯಾರೊಬ್ಬರು ಕೂಡ ನಿಮ್ಮ ಮುಂದೆ ತಲೆ ಬಾಗಲ್ಲ‘ ಎಂದು ಅವರು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧ ತಮ್ಮ ಪುತ್ರ ತೇಜಸ್ವಿ ಯಾದವ್ ಅವರ ದೆಹಲಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯವು ಶುಕ್ರವಾರ ದಾಳಿ ನಡೆಸಿತ್ತು. ಅದಕ್ಕೂ ಮುನ್ನ ಪತ್ನಿ ರಾಬ್ರಿ ದೇವಿ ಹಾಗೂ ಇತರೆ ಕುಟುಂಬ ಸದಸ್ಯರ ವಿರುದ್ಧ ಸಿಬಿಐ ದಾಳಿ ನಡೆಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.