ಮಂಗಳವಾರ, ಸೆಪ್ಟೆಂಬರ್ 28, 2021
20 °C

ಐಎಎಫ್‌ ಮೇಲೆ ದಾಳಿ: ಡ್ರೋನ್‌ ಬಳಕೆಗೆ ಪಾಕ್ ಬೆಂಬಲ –ಡಿಜಿಪಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಉಗ್ರರ ಸಂಘಟನೆಗಳಿಂದ ಭದ್ರತೆಗೆ ಇರುವ ಅಪಾಯಗಳಿಗೆ ಡ್ರೋನ್‌ಗಳ ಬಳಕೆಯು ಹೊಸ ಆಯಾಮವನ್ನೇ ನೀಡಿದೆ. ಈಚೆಗೆ ಇಲ್ಲಿನ ಐಎಎಫ್‌ ನೆಲೆಯ ಮೇಲೆ ನಡೆದ ಡ್ರೋನ್‌ ದಾಳಿ ಕುರಿತ ತನಿಖೆಯ ಪ್ರಕಾರ, ಉಗ್ರ ಸಂಘಟನೆಗಳ ಈ ಕೃತ್ಯಕ್ಕೆ ಪಾಕಿಸ್ತಾನ ಸೇನೆ, ಗುಪ್ತದಳದ ಬೆಂಬಲವೂ ಇರುವುದು ಗೊತ್ತಾಗಿದೆ.

ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್‌ಬಾಗ್‌ ಸಿಂಗ್ ಮಂಗಳವಾರ ಈ ಮಾಹಿತಿ ನೀಡಿದ್ದು, ಈ ಹಿಂದೆಯೂ ನೆರೆ ರಾಷ್ಟ್ರವು ಗಡಿಯೊಳಗೆ ಹಣ, ಶಸ್ತ್ರಾಸ್ತ್ರ, ಮದ್ದುಗುಂಡು ಪುರೈಕೆಗೆ ಡ್ರೋನ್‌ ಬಳಸಿರುವುದು ಇದೆ. ಭದ್ರತೆಗಿರುವ ಈ ಹೊಸ ಬೆದರಿಕೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಹೆಚ್ಚುವರಿ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದರು.

1987ರ ಕೆಡರ್‌ನ ಐಪಿಎಸ್‌ ಅಧಿಕಾರಿಯಾಗಿರುವ ಸಿಂಗ್‌ ಅವರು, ಲಷ್ಕರ್‌ ಎ ತಯಬಾ (ಎಲ್‌ಇಟಿ) ಸೇರಿದಂತೆ ಹಲವು ಉಗ್ರರ ಸಂಘಟನೆಗಳು ಡ್ರೋನ್‌ ಬಳಕೆ ಮಾಡುತ್ತಿವೆ. ಬೆದರಿಕೆಯ ಹೊಸ ಆಯಾಮ ನೀಡಿದೆ. ಡ್ರೋನ್‌ ಮೊದಲಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಳಕೆಯಾಯಿತು. ಇಂಥ ದಾಳಿಯನ್ನು ಹತ್ತಿಕ್ಕಲು ಸಜ್ಜಾಗಲೇಬೇಕಾಗಿದೆ. ಮಾದಕವಸ್ತು, ಸ್ಫೋಟಕಗಳ ಸಾಗಣೆಗೆ ಡ್ರೋನ್‌ ಬಳಕೆಯಾಗಿದ್ದ ಸಂದರ್ಭದಲ್ಲಿ ಅವುಗಳನ್ನು ನಮ್ಮ ಭದ್ರತಾ ಪಡೆಗಳು ಪರಿಣಾಮಕಾರಿಯಾಗಿ ಹತ್ತಿಕ್ಕಿವೆ ಎಂದು ನಾನು ಹೇಳಬಯಸುತ್ತೇನೆ ಎಂದು ತಿಳಿಸಿದರು.

ಜೂನ್‌ 26ರ ರಾತ್ರಿ ಭಾರತೀಯ ವಾಯುಪಡೆ ನೆಲೆಯ ಮೇಲೆ ಸ್ಫೋಟಕವನ್ನು ಹಾಕಲು ಡ್ರೋನ್ ಬಳಸಲಾಗಿದೆ. ಇಂಥ ಕೃತ್ಯಗನ್ನು ಕೈಗೊಳ್ಳಲು ಉಗ್ರ ಸಂಘಟನೆಗಳಿಗೆ ನೆರೆ ರಾಷ್ಟ್ರ ಬೆಂಬಲ ನೀಡಿರುವುದು ಖಂಡನಾರ್ಹ ಬೆಳವಣಿಗೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು