ನವದೆಹಲಿ: ಅರುಣಾಚಲಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನಡೆದಿದ್ದ ಚೀನಾದೊಂದಿಗಿನ ಸೇನಾ ಸಂಘರ್ಷದ ಬೆನ್ನಲ್ಲೇ ಭಾರತೀಯ ವಾಯುಪಡೆಯು (ಐಎಎಫ್) ತನ್ನ ಯುದ್ಧ ಸಾಮರ್ಥ್ಯ ಪರೀಕ್ಷಿಸಿಕೊಳ್ಳುವ ಸಲುವಾಗಿ ಈಶಾನ್ಯ ಗಡಿ ಪ್ರದೇಶದಲ್ಲಿ ಭಾರಿ ಸಮರಾಭ್ಯಾಸ ನಡೆಸಲು ಮುಂದಾಗಿದ್ದು, ಇದಕ್ಕೆ ಸೋಮವಾರ ಚಾಲನೆ ಲಭಿಸಿದೆ.
ಈ ಸಮರಾಭ್ಯಾಸದಲ್ಲಿ ಐಎಎಫ್‌ನ ಯುದ್ಧ ವಿಮಾನಗಳಾದ ರಫೇಲ್ ಮತ್ತು ಸುಖೋಯ್–30ಎಂಕೆಐ ಭಾಗವಹಿಸಲಿವೆ.
‘ಪೂರ್ವಿ ಆಕಾಶ್ ಹೆಸರಿನಡಿ ಪ್ರತಿ ವರ್ಷವೂ ಆಯೋಜಿಸಲಾಗುವ ಕಮಾಂಡ್ ಹಂತದ ಸಮರಾಭ್ಯಾಸವು ಸೋಮವಾರ ಆರಂಭವಾಗಿದೆ. ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷ ಇದನ್ನು ಹಮ್ಮಿಕೊಳ್ಳಲು ಆಗಿರಲಿಲ್ಲ’ ಎಂದು ಐಎಎಫ್‌ನ ಪೂರ್ವ ಏರ್ ಕಮಾಂಡ್ ಟ್ವೀಟ್ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.