ನವದೆಹಲಿ: ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು ಭಾನುವಾರದಿಂದ (ನ.28) ಐದು ದಿನಗಳ ಈಜಿಪ್ಟ್ ಪ್ರವಾಸ ಕೈಗೊಂಡಿದ್ದಾರೆ.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟೂ ಬಲಪಡಿಸುವ ಉದ್ದೇಶದಿಂದ ಅವರು ಈ ಪ್ರವಾಸ ಕೈಗೊಂಡಿದ್ದಾರೆ ಎಂದು ವಾಯುಪಡೆ ಪ್ರಕಟಣೆ ತಿಳಿಸಿದೆ .

‘ನ.28ರಿಂದ ಡಿಸೆಂಬರ್ 2ರ ವರೆಗೆ ಕೈರೊದಲ್ಲಿ ನಡೆಯಲಿರುವ ಈಜಿಪ್ಟ್ ಏರ್ ಪವರ್ ಸಿಂಪೋಜಿಯಂ ಆ್ಯಂಡ್ ಈಜಿಪ್ಷಿಯನ್ ಡಿಫೆನ್ಸ್ ಎಕ್ಸ್‌ಪೊಜಿಷನ್’ (ಇಡಿಇಎಕ್ಸ್)ನಲ್ಲಿ ಏರ್ ಚೀಫ್ ಮಾರ್ಷಲ್ ಚೌಧರಿ ಪಾಲ್ಗೊಳ್ಳುವರು. ‘ವಾಯು ರಕ್ಷಣಾ ವ್ಯವಸ್ಥೆಯಲ್ಲಿ ದಕ್ಷತೆ ಹಾಗೂ ಸಂಘಟಿತವಲ್ಲದ ದಾಳಿಗಳು’ ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.