ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಅಲೆ ವಿಳಂಬವಾಗುವ ಸಾಧ್ಯತೆ: ಕೋವಿಡ್‌ ಕಾರ್ಯಪಡೆ ಮುಖ್ಯಸ್ಥ

ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ ಆತಂಕಕ್ಕೆ ಕಾರಣವಾಗಿರುವ ಕೋವಿಡ್‌ನ ಮೂರನೇ ಅಲೆಯು ವಿಳಂಬವಾಗುವ ಸಾಧ್ಯತೆಗಳಿವೆ,’ ಎಂದು ರಾಷ್ಟ್ರೀಯ ಕೋವಿಡ್‌ ಕಾರ್ಯಪಡೆಯ ಮುಖ್ಯಸ್ಥ ಡಾ. ಎನ್‌.ಕೆ ಅರೋರಾ ಹೇಳಿದ್ದಾರೆ.

‘3ನೇ ಅಲೆಯು ತಡವಾಗಿ ಬರುವ ಸಾಧ್ಯತೆ ಇದೆ ಎಂದು ಐಸಿಎಂಆರ್ ಅಧ್ಯಯನವೊಂದನ್ನು ಮಂಡಿಸಿದೆ. ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ನಾವು 6-8 ತಿಂಗಳ ಅವಧಿಯನ್ನು ಗುರುತು ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ, ಪ್ರತಿದಿನ 1 ಕೋಟಿ ಡೋಸ್‌ಗಳನ್ನು ನೀಡುವ ಗುರಿಯನ್ನು ಸರ್ಕಾರ ಹೊಂದಿದೆ,‘ ಎಂದು ಅರೋರಾ ಹೇಳಿದರು.

ಆದರೆ, ಮೂರನೇ ಅಲೆಗೆ ಸಂಬಂಧಿಸಿದಂತೆ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ.

‘ಝೈಡಸ್ ಕ್ಯಾಡಿಲಾ ಲಸಿಕೆಯ ಪ್ರಯೋಗ ಬಹುತೇಕ ಪೂರ್ಣಗೊಂಡಿದೆ. ಜುಲೈ ಅಂತ್ಯದ ವೇಳೆಗೆ ಅಥವಾ ಆಗಸ್ಟ್‌ನಲ್ಲಿ ಈ ಲಸಿಕೆಯನ್ನು 12-18 ವಯಸ್ಸಿನ ಮಕ್ಕಳಿಗೆ ನೀಡಲು ಪ್ರಾರಂಭಿಸಲಾಗುವುದು,’ ಎಂದೂ ಅವರು ತಿಳಿಸಿದರು.

ಸಂಭಾವ್ಯ ಮೂರನೇ ಅಲೆಯು ಮಕ್ಕಳನ್ನು ಕಾಡಬಹುದಾದ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT