ಮಂಗಳವಾರ, ಮಾರ್ಚ್ 21, 2023
23 °C

ಕಾಶ್ಮೀರ ಪರಿಸ್ಥಿತಿ ಚೆನ್ನಾಗಿದ್ದರೆ ಅಮಿತ್ ಶಾ ಕಾಲ್ನಡಿಗೆಯಲ್ಲಿ ಸಾಗಲಿ: ರಾಹುಲ್

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದ್ದರೆ ಜಮ್ಮುವಿನಿಂದ ಶ್ರೀನಗರದ ಲಾಲ್ ಚೌಕ್‌ವರೆಗೆ ಅಮಿತ್‌ ಶಾ ಕಾಲ್ನಡಿಗೆಯಲ್ಲಿ ಸಾಗಲಿ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ  ಸವಾಲು ಎಸೆದಿದ್ದಾರೆ.  

ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂಬ ಬಿಜೆಪಿ ಹೇಳಿಕೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳು, ಬಾಂಬ್ ಸ್ಫೋಟಗಳು ಮುಂದುವರಿದಿವೆ. ಭದ್ರತಾ ಸಿಬ್ಬಂದಿ ಆಡುತ್ತಿರುವ ಮಾತುಗಳಿಂದ ಇಲ್ಲಿನ ರಕ್ಷಣಾ ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದು ತಿಳಿಯುತ್ತಿದೆ. ಒಂದೊಮ್ಮೆ ರಕ್ಷಣಾ ಸ್ಥಿತಿ ಉತ್ತಮವಾಗಿದೆ ಎಂದು ಬಿಜೆಪಿ ಆಲೋಚಿಸುತ್ತಿದ್ದರೆ, ಅಮಿತ್ ಶಾ ಜಮ್ಮುವಿನಿಂದ ಲಾಲ್ ಚೌಕ್‌ವರೆಗೆ ಏಕೆ ನಡೆದುಕೊಂಡು ಹೋಗಬಾರದು ಎಂದು ವ್ಯಂಗ್ಯವಾಡಿದರು. 

ಕಾಶ್ಮೀರದ ಜನ ನೋವಿನಲ್ಲಿದ್ದಾರೆ. ರಾಜ್ಯಕ್ಕೆ ಮೊದಲಿನ ಸ್ಥಾನಮಾನ ಒದಗಿಸುವುದು ಮತ್ತು ಪ್ರಜಾಪ್ರಭುತ್ವ ನೀಡುವುದು ಕಾಂಗ್ರೆಸ್‌ನ ಮೊದಲ ಹೆಜ್ಜೆಯಾಗಿದೆ ಎಂದು ಗಾಂಧಿ ಹೇಳಿದರು.

ತಮ್ಮ ಪೂರ್ವಜರು ಕಾಶ್ಮೀರದಿಂದ ಅಲಹಾಬಾದ್‌ಗೆ ತೆರೆಳಿದ್ದರು. ತಾನು ಪ್ರೀತಿ ಮತ್ತು ವಾತ್ಸಲ್ಯದಿಂದ ಕಾಶ್ಮೀರದತ್ತ ಸಾಗುತ್ತಿರುವೆ ಎಂದು ರಾಹುಲ್‌ ತಿಳಿಸಿದರು.

370ನೇ ವಿಧೇಯಕ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಣಯಕ್ಕೆ ತಾನು ಬದ್ಧನಾಗಿದ್ದೇನೆ ಎಂದು ಅವರು ಪ್ರತಿಪಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು