ಶನಿವಾರ, ಸೆಪ್ಟೆಂಬರ್ 18, 2021
30 °C

ದೆಹಲಿಯಲ್ಲಿ ಭಾರಿ ಮಳೆ; ವಿಮಾನ ನಿಲ್ದಾಣದ ಮುಂಭಾಗ ಸೇರಿದಂತೆ, ಹಲವೆಡೆ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗ ಸೇರಿದಂತೆ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಸ್ಥಳೀಯ ಸಂಸ್ಥೆಗಳ ಮಾಹಿತಿ ಪ್ರಕಾರ, ದೆಹಲಿ ವಿಮಾನ ನಿಲ್ದಾಣ ಸೇರಿದಂತೆ ನಗರದ ಮೋತಿ ಬಾಘ್‌, ಆರ್‌.ಕೆ. ಪುರಂ, ಮಧು ವಿಹಾರ್, ಹರಿನಗರ, ರೋಹ್ತಕ್ ರಸ್ತೆ, ಬದಾರ್‌ಪುರ, ಸೋಮ್ ವಿಹಾರ, ವರ್ತುಲ ರಸ್ತೆ ಸಮೀಪವಿರುವ ಐಪಿ ಸ್ಟೇಷನ್, ವಿಕಾಸ್ ಮಾರ್ಗ್, ಸಂಗಮ್ ವಿಹಾರ್, ಮೆಹುರುಲಿ–ಬಾದರ್‌ಪುರ ರಸ್ತೆ, ಪೌಲ್ ಪ್ರಹ್ಲಾಪುರ ಕೆಳ ಸೇತುವೆ, ಮುನಿರ್ಕಾ, ರಾಜ್‌ಪುರ ಖುರ್ದ್‌, ನಂಗ್ಲೊಯಿ ಮತ್ತು ಕಿರಾರಿ ಪ್ರದೇಶಗಳೆಲ್ಲ ಜಲಾವೃತಗೊಂಡಿವೆ. ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಜಲಾವೃತಗೊಂಡಿರುವ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ.

‘ವಿಮಾನ ನಿಲ್ದಾಣದ ಮುಂಭಾಗದಲ್ಲಿ ಸ್ವಲ್ಪ ಸಮಯದವರೆಗೆ ಮಳೆ ನೀರು ತುಂಬಿತ್ತು. ಸದ್ಯ ಈ ಸಮಸ್ಯೆಯನ್ನು  ಬಗೆಹರಿಸಿದ್ದೇವೆ‘ ಎಂದು ದೆಹಲಿ ಇಂಟರ್‌ನ್ಯಾಷನಲ್‌ ಏರ್ಪೋರ್ಟ್‌ ಲಿ.(ಡಿಐಎಎಲ್‌) ಟ್ವೀಟ್‌ ಮಾಡಿದೆ.

‘ಹವಾಮಾನ ವೈಪರೀತ್ಯದಿಂದಾಗಿ ಇಂದು ಬೆಳಿಗ್ಗೆ ಐದು ವಿಮಾನಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ’ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಲೋಕೋಪಯೋಗಿ ಇಲಾಖೆ ಸಿಬ್ಬಂದಿ ರಸ್ತೆಯಲ್ಲಿ ನಿಂತಿದ್ದ ಮಳೆ ನೀರನ್ನು ತೆರವುಗೊಳಿಸುವಲ್ಲಿ ನಿರತರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು