ಶುಕ್ರವಾರ, ಡಿಸೆಂಬರ್ 2, 2022
19 °C

ಪ್ರತಿಕೂಲ ಹವಾಮಾನ: ‘ವಿಕ್ರಂ–ಎಸ್‌’ ರಾಕೆಟ್‌ ಉಡಾವಣೆ ಮುಂದಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಖಾಸಗಿಯಾಗಿ ಅಭಿವೃದ್ಧಿಪಡಿಸಲಾಗಿರುವ ದೇಶದ ಮೊದಲ ರಾಕೆಟ್‌ ‘ವಿಕ್ರಂ–ಎಸ್‌’ನ ಉಡಾವಣೆಯನ್ನು ಪ‍್ರತಿಕೂಲ ಹವಾಮಾನದ ಕಾರಣ  ಮುಂದೂಡಲಾಗಿದೆ’ ಎಂದು ಹೈದರಾಬಾದ್‌ ಮೂಲದ ಬಾಹ್ಯಾಕಾಶ ನವೋದ್ಯಮ ಸಂಸ್ಥೆ ‘ಸ್ಕೈರೂಟ್‌ ಏರೋಸ್ಪೇಸ್‌’ ಭಾನುವಾರ ತಿಳಿಸಿದೆ.

‘ಇದೇ 15ರಂದು ರಾಕೆಟ್‌ ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಇದನ್ನು ಮುಂದೂಡಲಾಗಿದೆ. ಉಡಾವಣೆಗೆ ಇದೇ 15ರಿಂದ 19ರವರೆಗೆ ಕಾಲಾವಕಾಶ ನೀಡಲಾಗಿದೆ. ಇಸ್ರೋದ ಶ್ರೀಹರಿಕೋಟ ಉಡ್ಡಯನ ಕೇಂದ್ರದಿಂದ 18ರಂದು ಬೆಳಿಗ್ಗೆ 11.30ಕ್ಕೆ ರಾಕೆಟ್‌ ಉಡಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ’ ಎಂದು ಸ್ಕೈರೂಟ್‌ ಏರೋಸ್ಪೇಸ್‌ನ ವಕ್ತಾರ ಹೇಳಿದ್ದಾರೆ. 

ದೇಶದ ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯ್‌ ಅವರ ಸ್ಮರಣಾರ್ಥವಾಗಿ ಈ ರಾಕೆಟ್‌ಗೆ ‘ವಿಕ್ರಂ–ಎಸ್‌’ ಎಂದು ಹೆಸರಿಡಲಾಗಿದೆ. ಇದು ಬಾಹ್ಯಾಕಾಶಕ್ಕೆ ಮೂರು ಪೇಲೋಡ್‌ಗಳನ್ನು ಹೊತ್ತುಯ್ಯುವ ಸಾಮರ್ಥ್ಯ ಹೊಂದಿದೆ. ಸ್ಕೈರೂಟ್‌ ಸಂಸ್ಥೆಯು ತನ್ನ ಈ ಚೊಚ್ಚಲ ಯೋಜನೆಗೆ ‘ಪ್ರಾರಂಭ್‌’ ಎಂದು ಹೆಸರಿಟ್ಟಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು