ನವದೆಹಲಿ (ಪಿಟಿಐ): ‘ಭಾರತ–ರಷ್ಯಾ ಮಧ್ಯದ ನಾಗರಿಕ ವಿಮಾನಯಾನ ಸೇವೆಯ ಒಪ್ಪಂದವನ್ನು ಪರಿಷ್ಕರಿಸಲು ಎರಡೂ ದೇಶಗಳು ತಾತ್ವಿಕ ಒಪ್ಪಿಗೆ ನೀಡಿದ್ದು, ಇದರ ಅನ್ವಯ ರಷ್ಯಾದ ವಿಮಾನಗಳು ಭಾರತಕ್ಕೆ ವಾರಕ್ಕೆ 64 ಬಾರಿ ಹಾರಾಟ ನಡೆಸಲಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸಧ್ಯ ಇರುವ ಒಪ್ಪಂದದ ಪ್ರಕಾರ, ರಷ್ಯಾ ವಿಮಾನಗಳು ವಾರಕ್ಕೆ 52 ಬಾರಿ ಮಾತ್ರ ಭಾರತಕ್ಕೆ ಬರುತ್ತಿದ್ದವು. ನಾಗರಿಕ ವಿಮಾನಯಾನ ಸಂಬಂಧ ದ್ವಿಪಕ್ಷೀಯ ಸಭೆಯಲ್ಲಿ ಭಾಗಿಯಾಗಲು ಭಾರತದ ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಅವರು ಕಳೆದ ತಿಂಗಳು ಮಾಸ್ಕೊಗೆ ಭೇಟಿ ನೀಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.