ಭಾನುವಾರ, ಸೆಪ್ಟೆಂಬರ್ 19, 2021
26 °C

ಆ.1ರಿಂದ ಭಾರತ–ರಷ್ಯಾ ಸೇನಾ ಸಮರಾಭ್ಯಾಸ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಷ್ಯಾದ ವೋಲ್ಗೊಗ್ರ್ಯಾಡ್‌ನಲ್ಲಿ ಆಗಸ್ಟ್‌ 1ರಿಂದ 13ರವರೆಗೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಕೇಂದ್ರೀಕರಿಸಿ, ಭಾರತ ಮತ್ತು ರಷ್ಯಾಗಳು ಜಂಟಿಯಾಗಿ ಮಿಲಿಟರಿ ತಾಲೀಮು ನಡೆಸಲಿವೆ ಎಂದು ಭಾರತೀಯ ಸೇನೆ ಮಂಗಳವಾರ ತಿಳಿಸಿದೆ.

‘12ನೇ ಆವೃತ್ತಿಯ ‘ಇಂದ್ರ’ ತಾಲೀಮು ಉಭಯ ದೇಶಗಳ ನಡುವಿನ ಭದ್ರತಾ ಸಹಕಾರವನ್ನು ಬಲಪಡಿಸುವಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ. ಭಾರತ ಮತ್ತು ರಷ್ಯಾದ ನಡುವಿನ ದೀರ್ಘಕಾಲದ ಸ್ನೇಹ ಬಲಪಡಿಸುವಲ್ಲಿಯೂ ಇದು ಸಹಾಯವಾಗಲಿದೆ’ ಎಂದು ಸೇನೆಯ ಮೂಲಗಳು ಹೇಳಿವೆ.

‘ಮಿಲಿಟರಿ ತಾಲೀಮಿನಲ್ಲಿ ಎರಡೂ ದೇಶಗಳ ಕಡೆಯಿಂದ ತಲಾ 250 ಸೇನಾ ಸಿಬ್ಬಂದಿ ಪಾಲ್ಗೊಳ್ಳುವರು. ವಿಶ್ವಸಂಸ್ಥೆಯ ಚೌಕಟ್ಟಿನಡಿಯಲ್ಲಿ ಕಡ್ಡಾಯವಾಗಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕುರಿತ ಜಂಟಿ ಮಿಲಿಟರಿ ಪಡೆಗಳ ತಾಲೀಮು ಇದಾಗಿದೆ’ ಎಂದೂ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು