ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದ ಚೇತರಿಕೆಯಾಗುತ್ತಿರುವವರ ಪ್ರಮಾಣ ಭಾರತದಲ್ಲೇ ಹೆಚ್ಚು ಎಂಬುದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ದತ್ತಾಂಶಗಳಿಂದ ತಿಳಿದುಬಂದಿದೆ. ಇದರೊಂದಿಗೆ, ಚೇತರಿಕೆ ಪ್ರಮಾಣದಲ್ಲಿಯೂ ಭಾರತವು ಬ್ರೆಜಿಲ್ ಅನ್ನು ಹಿಂದಿಕ್ಕಿದೆ.

ವಿಶ್ವದಾದ್ಯಂತ ಈವರೆಗೆ 1,96,25,959 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 2,90,06,033 ಜನರಿಗೆ ಸೋಂಕು ತಗುಲಿದ್ದು, 9,24,105 ಜನ ಮೃತಪಟ್ಟಿದ್ದಾರೆ.

ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ದತ್ತಾಂಶ ಪ್ರಕಾರ, ಭಾರತದಲ್ಲಿ ಸೋಂಕಿನಿಂದ ಈವರೆಗೆ 37,80,107 ಜನ ಗುಣಮುಖರಾಗಿದ್ದಾರೆ. ಬ್ರೆಜಿಲ್‌ನಲ್ಲಿ 37,23,206 ಹಾಗೂ ಅಮೆರಿಕದಲ್ಲಿ 24,51,406 ಮಂದಿ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ:Covid-19 India Update: 48 ಲಕ್ಷ ದಾಟಿದ ಸೋಂಕಿತರು, 9.86 ಲಕ್ಷ ಸಕ್ರಿಯ ಪ್ರಕರಣ

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿನ ಚೇತರಿಕೆ ಪ್ರಮಾನ ಶೇ 78ಕ್ಕೆ ತಲುಪಿದೆ. ಪ್ರತಿ ದಿನ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ.

‘ಕಳೆದ 24 ಗಂಟೆಗಳಲ್ಲಿ 77,512 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಒಟ್ಟು 37,80,107 ಮಂದಿ ಗುಣಮುಖರಾಗಿದ್ದಾರೆ. ಗುಣಮುಖರಾಗುತ್ತಿರುವವರ ಮತ್ತು ಸಕ್ರಿಯ ಪ್ರಕರಣಗಳ ನಡುವಣ ಅಂತರವೂ ಹೆಚ್ಚಾಗುತ್ತಿದೆ’ ಎಂದು ಸಚಿವಾಲಯ ತಿಳಿಸಿದೆ.

ದೇಶದಾದ್ಯಂತ ಗುಣಮುಖರಾದವರ ಪೈಕಿ ಶೇ 60ರಷ್ಟು ಮಂದಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಮತ್ತು ತಮಿಳುನಾಡಿನವರು ಎಂದೂ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ:ಸೆ.11ರ ವರೆಗೆ ದೇಶದಲ್ಲಿ ಕೋವಿಡ್ನಿಂದ 76,271 ಮಂದಿ ಸಾವು: ಸಚಿವ ಹರ್ಷವರ್ಧನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.