ಗುರುವಾರ , ಡಿಸೆಂಬರ್ 3, 2020
23 °C

ಭಾರತೀಯರು ತೆರಿಗೆ ಭಯೋತ್ಪಾದನೆಯಿಂದ ಪಾರದರ್ಶಕ ತೆರಿಗೆಗೆ ಬದಲಾಗಿದ್ದಾರೆ: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ 6 ವರ್ಷಗಳ ತೆರಿಗೆ ನೀತಿಗಳಿಂದಾಗಿ ಭಾರತೀಯರು ತೆರಿಗೆ ಭಯೋತ್ಪಾದನೆಯಿಂದ ಪಾರದರ್ಶಕ ತೆರಿಗೆಯತ್ತ ಹೊರಳಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನಮ್ಮ ಸರ್ಕಾರವು ತೆರಿಗೆ ಸಂಗ್ರಹ ಮಾಡು ವವರು ಹಾಗೂ ತೆರಿಗೆ ಪಾವತಿಸುವವರ ನಡುವಿನ  ವಿಶ್ವಾಸದ ಕೊರತೆಯನ್ನು ನಿವಾರಿಸಲು ಯತ್ನಿಸಿದೆ’ ಎಂದರು.

ಕಾರ್ಪೊರೇಟ್ ತೆರಿಗೆಯನ್ನು ಶೇಕಡ 22ಕ್ಕೆ ಇಳಿಸಿದ್ದು, ಲಾಭಾಂಶ ವಿತರಣಾ ತೆರಿಗೆಯನ್ನು ಇಲ್ಲವಾಗಿಸಿದ್ದು, ತೆರಿಗೆ ಮೊತ್ತವನ್ನು ತ್ವರಿತವಾಗಿ ಹಿಂದಿರುಗಿಸುತ್ತಿರುವುದು ಪಾರದರ್ಶಕತೆಯನ್ನು ತಂದಿವೆ, ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿವೆ ಎಂದರು.

‘ತೆರಿಗೆ ಭಯೋತ್ಪಾದನೆಯ ಸ್ಥಿತಿಯಿಂದ ಪಾರದರ್ಶಕ ತೆರಿಗೆ ಸ್ಥಿತಿಯತ್ತ ಸಾಗಲು ಸಾಧ್ಯವಾಗಿದ್ದಕ್ಕೆ ಕಾರಣ ಸರ್ಕಾರ ಅನುಸರಿಸುತ್ತಿರುವ ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ಎಂಬ ಮಾರ್ಗ’ ಎಂದು ಅವರು ಹೇಳಿದರು.

‘₹ 5 ಲಕ್ಷದವರೆಗಿನ ವಾರ್ಷಿಕ ಆದಾಯವು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿದೆ. ಇದರ ಪ್ರಯೋಜನವು ಕೆಳ ಮಧ್ಯಮ ವರ್ಗದ ಯುವಕರಿಗೆ ಸಿಗುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು ಅದು ಸರಳವಾಗಿದೆ’ ಎಂದರು.

ಆದಾಯ ತೆರಿಗೆ ಪಾವತಿ ಮಾಡುವವರ ವಿಚಾರದಲ್ಲಿ ಇರುವ ವಿಶ್ವಾಸವು ಹೆಚ್ಚಾಗಿದೆ. ಶೇಕಡ 99.75ರಷ್ಟು ಆದಾಯ ತೆರಿಗೆ ವಿವರಗಳನ್ನು ಜಗ್ಗಾಟ ಇಲ್ಲದೆಯೇ ಒಪ್ಪಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು