ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ: ಶಶಿ ತರೂರ್

ಕಾಂಗ್ರೆಸ್ ನಾಯಕ ಶಶಿ ತರೂರ್ ಅಭಿಮತ
Last Updated 23 ಅಕ್ಟೋಬರ್ 2020, 12:03 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಭಾರತ ‘ನಿಯಮ ರೂಪಿಸುವ‘ ರಾಷ್ಟ್ರವಾಗುವುದಕ್ಕಿಂತ ಹೆಚ್ಚಾಗಿ ‘ನಿಯಮ ಪಾಲಿಸುವ‘ ರಾಷ್ಟ್ರವಾಗಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್‌ ಹೇಳಿದ್ದಾರೆ.

‘ಸ್ಥಳೀಯವಾಗಿ ತೆಗೆದುಕೊಳ್ಳುವ ನಿಲುವುಗಳ ಪ್ರತಿಬಿಂಬವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಶ್ವಾಸರ್ಹತೆ ಕಾಣುತ್ತದೆ. ಈ ನಿಟ್ಟಿನಲ್ಲಿ ದೇಶವು, ಆರ್ಥಿಕತೆ ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಎದುರಿಸಲು ಆದ್ಯತೆ ನೀಡಬೇಕಿದೆ. ಆಗ ನಾವು ವಿದೇಶಗಳಲ್ಲೂ ಗೌರವಿಸಲ್ಪಡುತ್ತೇವೆ‘ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಸಾರ್ವಜನಿಕ ವ್ಯವಹಾರಗಳ ವೇದಿಕೆಯ 7ನೇ ರಾಷ್ಟ್ರೀಯ ಅಧಿವೇಶನದಲ್ಲಿ ಮಾತನಾಡಿದ ತರೂರ್, ‘ಈ ದಿನಗಳಲ್ಲಿ ನಮ್ಮ ದೇಶದದಲ್ಲಿ ಆಂತರಿಕ ಸಮಸ್ಯೆಗಳು ತೀವ್ರವಾಗಿವೆ. ಸಾಮಾಜಿಕ ಒಗ್ಗಟ್ಟಿನಲ್ಲಿ ಬಿರುಕು, ಅನಿಯಂತ್ರಿತವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕು, ಗಡಿಯಲ್ಲಿ ಚೀನಾದ ತಂಟೆ, ಡಿಮಾನಿಟೈಸನ್ ನಂತರ ಆರ್ಥಿಕ ಕುಸಿತ, ಇತಿಹಾಸ ನಿರ್ಮಿಸಿದ ನಿರುದ್ಯೋಗ ಸಮಸ್ಯೆಗಳು ಕಾಡುತ್ತಿವೆ‘ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT