ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಕೋಟಿ ಜನರಿಗೆ ಕೋವಿಡ್-19 ಲಸಿಕೆ ವಿತರಿಸಲು ದೇಶ ಸಿದ್ಧ

Last Updated 6 ಜನವರಿ 2021, 1:49 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19 ಲಸಿಕೆ ವಿತರಣೆಗೆ ದೇಶವು ಸಂಪೂರ್ಣ ಸಜ್ಜಾಗಿದ್ದು, ಜುಲೈ ವೇಳೆಗೆ 30 ಕೋಟಿ ಜನರಿಗೆ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಜಗತ್ತಿನಲ್ಲೇ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಅತಿ ದೊಡ್ಡ ಲಸಿಕೆ ಕಾರ್ಯಕ್ರಮಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಲಿದೆ.

ಅಧಿಕಾರಿಗಳು ದೇಶದ್ಯಾಂತ ಸುಮಾರು 29,000 ಕೋಲ್ಡ್ ಸ್ಟೋರೆಜ್ ಸೌಲಭ್ಯಗಳನ್ನು ಸಿದ್ಧಪಡಿಸಿದ್ದಾರೆ. ಅಲ್ಲದೆ ಎಲ್ಲ ರಾಜ್ಯಗಳು ಸೇರಿದಂತೆ 125 ಜಿಲ್ಲೆಗಳಲ್ಲಿ ಅತಿ ದೊಡ್ಡ ಲಸಿಕೆ ತಾಲೀಮು (ಡ್ರೈ-ರನ್) ನಡೆಸಲಾಗಿದೆ ಎಂದು ಫೆಡರಲ್ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದರು.

ಪ್ರಸ್ತುತ ಯೋಜನೆಯಡಿಯಲ್ಲಿ ಲಸಿಕೆಗಳನ್ನು ಮೊದಲು ನಾಲ್ಕು ಮುಖ್ಯ ಸ್ಟೋರೆಜ್‌ಗಳಿಗೆ ತಲುಪಿಸಲಿದ್ದಾರೆ. ಅಲ್ಲಿಂದ ರಾಜ್ಯಮಟ್ಟದ 37 ಸ್ಟೋರ್‌ಗಳಿಗೆ ವರ್ಗಾಯಿಸಲಾಗುವುದು. ಬಳಿಕ ರಸ್ತೆ ಮಾರ್ಗವಾಗಿ ಆಯಾ ಜಿಲ್ಲೆಗಳಿಗೆ ಸಾಗಿಸಲಾಗುವುದು.

ಕೋವಿಡ್-19 ಲಸಿಕೆ ವಿತರಣೆಯ ನಿರ್ದಿಷ್ಟ ದಿನಾಂಕದ ಬಗ್ಗೆ ವಿಚಾರಿಸಿದಾಗ ಈ ಸಂಬಂಧ ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಹೊಸ ವರ್ಷದಲ್ಲಿ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ), ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಸೇರಿದಂತೆ ಎರಡು ಲಸಿಕೆಗಳಿಗೆ ಅನುಮೋದನೆಯನ್ನು ನೀಡಿತ್ತು. ಇದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಕೆರಳಿಸಿದೆ.

ಲಸಿಕೆ ರಫ್ತಿಗೂ ಯಾವುದೇ ನಿರ್ಬಂಧ ಹೇರಿಲ್ಲ ಎಂಬುದನ್ನು ಭೂಷಣ್ ಸ್ಪಷ್ಟಪಡಿಸಿದರು. ಆದರೂ ದೇಶೀಯ ಲಸಿಕೆ ಬೇಡಿಕೆ ಪೂರೈಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಜಗತ್ತಿನ ಅತಿ ದೊಡ್ಡ ಔಷಧ ತಯಾರಕ ದೇಶವಾಗಿರುವ ಭಾರತ, ಜಾಗತಿಕ ಬೇಡಿಕೆಗಳಿಗೆ ಅನುಗುಣವಾಗಿ ಹೆಚ್ಚಿನ ಹೂಡಿಕೆಯೊಂದಿಗೆ ಲಸಿಕೆ ತಯಾರಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT