Covid-19 India Update: 36,571 ಹೊಸ ಪ್ರಕರಣ, 540 ಮಂದಿ ಸಾವು

ನವದೆಹಲಿ: ದೇಶದಾದ್ಯಂತ ಶುಕ್ರವಾರ 24 ಗಂಟೆಗಳ ಅವಧಿಯಲ್ಲಿ 36,571 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 540 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 3,23,58,829 ಕ್ಕೆ ಏರಿಕೆಯಾಗಿದೆ. ಆ ಪೈಕಿ 4,33,589 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.
ಇದುವರೆಗೆ 3,31,561,635 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 3,63,605 ಸಕ್ರಿಯ ಪ್ರಕರಣಗಳಿವೆ.
ಕೇರಳದಲ್ಲಿ 1,79,835, ಮಹಾರಾಷ್ಟ್ರದಲ್ಲಿ 61,082, ಕರ್ನಾಟಕದಲ್ಲಿ 21,159, ತಮಿಳುನಾಡಿನಲ್ಲಿ 19,864, ಆಂಧ್ರಪ್ರದೇಶ 15,738 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ... ತೆಲಂಗಾಣದಲ್ಲಿ ಖೋಟಾ ನೋಟು ಜಾಲ: ಐವರ ಬಂಧನ, ₹16 ಲಕ್ಷದ ನಕಲಿ ನೋಟು ವಶ
COVID19 | India registers 36,571 new cases in the last 24 hours; Active caseload stands at 3,63,605; lowest in 150 days. Recovery rate increases to 97.54%: Ministry of Health and Family Welfare pic.twitter.com/wuTcljM2Sw
— ANI (@ANI) August 20, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.